ಹು-ಧಾ ಪಾಲಿಕೆ ಚುನಾವಣೆ ಪ್ರಣಾಳಿಕೆ ಭರವಸೆ ಈಡೇರಿಸಲು ದೃಢ ಸಂಕಲ್ಪ: ಡಿಕೆಶಿ | Dharwad |

ಆಸ್ತಿ ತೆರಿಗೆಯಲ್ಲಿ ಪ್ರತಿಶಿತ 50 ರಷ್ಟು ಕಡಿತ ಸೇರಿದಂತೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ತಮ್ಮ ಪಕ್ಷ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯ ಪ್ರತಿ ವಾಗ್ದಾನಗಳನ್ನೂ ಈಡೇರಿಸಿ ಜಾರಿಗೊಳಿಸಲು ಕಟಿಬದ್ದರಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿಯವರಂತೆ ಸುಳ್ಳು ಹೇಳುವವರಲ್ಲ, ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ದೃಢ ಸಂಕಲ್ಪ ಮಾಡಿದ್ದೇವೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ, ರಾಜ್ಯ ಹಾಗೂ ಸ್ಥಳೀಯವಾಗಿ ಅವರದ್ದೇ ಸರಕಾರ ಇತ್ತು ಆದರೆ ಜನರಿಗೆ ಏನು ಲಾಭ ಆಗಿಲ್ಲ. ಖಾಸಗಿ ಸಹಭಾಗೀತ್ವದಲ್ಲಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ, ಸಿಬಿಎಸ್ಸಿ ಸ್ಕೂಲ್ ಮಾಡ್ತೇವೆ ಅಂಥಾ ಜೋಶಿ ಅವರು,ಶೆಟ್ಟರ್ ಅವರು ಹೇಳಿದ್ದರು, ಅವು ಎಲ್ಲಿದ್ದಾವೆ ನಿಮ್ಮ ಶಾಸಕರನ್ನು ನಮ್ಮ ಜೊತೆ ಕಳಿಸಿ ನಾವು ನೋಡ್ಕೊಂಡ ಬರ್ತೀವಿ ಎಂದು ಕೊಟ್ಟಿರೋ ಭರವಸೆ ಈಡೇರಿಸದೆ ಬಿಜೆಪಿ ಸರ್ಕಾರ ಸುಳ್ಳು ಭರವಸೆ ನಿಡ್ತಿದೆ ಎಂದರು. ಹು-ಧಾ ಮಹಾನಗರ ಗುಂಡಿಗಳ ನಗರ, ಇಲ್ಲಿ ಡ್ಯಾನ್ಸ್ ಕಲಿಯಬೇಕಿಲ್ಲಾ ಅದಾಗಲೇ ಬರುತ್ತೆ. ಇದಕ್ಕೆ ಇವರಿಗೆ ಮತ ಹಾಕಬೇಕಾ? ಅಡುಗೆ ಅನಿಲಕ್ಕೆ ಪೈಪ್ ಲೈನ್ ಹಾಕುತ್ತೇವೆ ಎಂದು ಹೇಳಿ ಎಲ್ಲಾ ಪೆಟ್ರೋಲ್ ಬಂಕ್‍ನಲ್ಲಿ ಇವರ ಫೋಟೋ ಹಾಕಿದ್ದೀರಿ, ಬಿಜೆಪಿಯವರ ಪ್ರಣಾಳಿಕೆ ಸುಳ್ಳಿನ ಸರಮಾಲೆ. ಬಿಜೆಪಿಯವರಿಗೆ ನುಡಿದಂತೆ ನಡೆಯಲು ಆಗಲಿಲ್ಲ, ಮಹಾನಗರದ ಮತದಾರರ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ಹರಿಹಾಯ್ದರು. ಹುಬ್ಬಳ್ಳಿ-ಧಾರವಾಡ ನಡುವೆ ಬಿಆರಟಿಎಸ್ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂಥಾ ಬಿಜೆಪಿ ಶಾಸಕರೆ ಆಗಿರುವ ಬೆಲ್ಲದ ಹೇಳಿದ್ದಾರೆ. ಭ್ರಷ್ಟಾಚಾರ ಏನ ನಡೆದಿದೆ ಅನ್ನೋದನ್ನ ಬೆಲ್ಲದ ಅವರೇ ಹೇಳ್ತಾರೆ. ಬೆಳಗಾವಿ ಬೆಂಗಳೂರು ಹುಬ್ಬಳ್ಳಿ ಹೈಟೆಕ್ ರಸ್ತೆ ಮಾಡ್ತೇನೆ ಅಂದ್ರು ಆದರೆ ಯಾವು ಅನುಷ್ಠಾನಕ್ಕೆ ಬರಲಿಲ್ಲ ಎಂದು ಸರ್ಕಾರದ ವಿರುದ್ದ ಕುಟುಕಿದರು.