ಜಗ್ಗಲಗಿ ನಾದಕ್ಕೆ ಜಗದೀಶ್ ಶೆಟ್ಟರ್ ಫೀದಾ

ಏನೇ ಹೇಳಿ ಎಂತಹ ಸಂದರ್ಭವಿರಲಿ ಆ ವಾತಾವರಣದಲ್ಲಿ ಒಂದು ಜೋಶ್ ತುಂಬುವ ತಾಕತ್ತು ಇರೋದು ಚರ್ಮ ವಾದ್ಯಗಳಿಗೆ ಮಾತ್ರ. ಅದರಲ್ಲೂ ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆ ವೇಳೆ ಚರ್ಮ ವಾದ್ಯಗಳ ಶಬ್ಧ, ಕುಳಿತವರನ್ನೂ ಕುಣಿಯೋವಂತೆ ಮಾಡುತ್ತೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗಾಗಿ ನಡೆದ ಜಗ್ಗಲಗಿ ಹಬ್ಬವಂತೂ ಕಿವಿ ನಿಮಿರುವಂತೆ ಮಾಡಿತು. ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆ ವೇಳೆ ಚರ್ಮ ವಾದ್ಯಗಳ ಶಬ್ಧ, ಕುಳಿತವರನ್ನೂ ಕುಣಿಯೋವಂತೆ ಮಾಡುತ್ತೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗಾಗಿ ನಡೆದ ಜಗ್ಗಲಗಿ ಹಬ್ಬವಂತೂ ಕಿವಿ ನಿಮಿರುವಂತೆ ಮಾಡಿತು. ಅದೆಂಥಾ ಹುರುಪು, ಸಾಟಿಯಾಗದ ಉತ್ಸಾಹ, ಇವರ ಈ ಉತ್ಸಾಹಕ್ಕೆ ಇಡೀ ಹುಬ್ಬಳ್ಳಿ ನಗರವೇ ಅದುರಿ ಹೋಗುವಂತಿತ್ತು. ಜೊತೆಗೆ ಎಲ್ರ ತಲೆಮೇಲೊಂದು ಕೇಸರಿ ಟೋಪಿ.
ವಾವ್, ಜೋಶ್ ಅಂದ್ರೇ ಹೀಗೇ ಇರಬೇಕು. ಇದು ಗಂಡುಮೆಟ್ಟಿನ ನಾಡಿನ, ಕಲರ್ ಫುಲ್ ಹಬ್ಬ ಅದೇ ಜಗ್ಗಲಿಗೆ ಹಲಗಿ ಹಬ್ಬದ ವೈಶಿಷ್ಟ್ಯ, ಅಂದ ಹಾಗೇ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನ ಇಂದಿನ ಪೀಳಿಗೆಗೂ ಪರಿಚಯಿಸೋದಕ್ಕಾಗಿ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ರಂಗಪಂಚಮಿ ವೇಳೆ ಮೂರುಸಾವಿರ ಮಠದಲ್ಲಿ ಜಗ್ಗಲಗಿ ಹಬ್ಬ ಆಯೋಜಿಸಲಾಗುತ್ತೆ. ಹುಬ್ಬಳ್ಳಿಯ ರಂಗ ಪಂಚಮಿಗೆ ಭರ್ಜರಿ ಮುನ್ನಡಿ ಬರೆದಿದ್ದು,ಈ ಜಗ್ಗಲಗಿ ಮೇಳದಲ್ಲಿ ನಾಡಿದ ಮಠಾದೀಶರು, ರಾಜಕಾರಣಿ ಭಾಗಿಯಾದ್ರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ರು. ಹಲಗಿ ಹಬ್ಬದ ಸಂಭ್ರಮವನ್ನು ಕಣ್ಣುತುಂಬಿಕೊಳ್ಳಲು ನಗರದ ರಸ್ತೆಯಲ್ಲಿ ಜಮ ಸಾಗರವೆ ನೆರೆದಿತ್ತು, ವಿಶೇಷ ಅಂದ್ರೇ ವಿವಿಧ ಸಂಘಟನೆಗಳು ಮತ್ತು ಎಲ್ಲ ಪಕ್ಷದ ನಾಯಕರು ಇದರಲ್ಲಿ ಪಾಲ್ಗೊಳ್ಳಲು ಮೂಲಕ ಹಬ್ಬದ ಮೆರಗು ಮತ್ತಷ್ಟು ಹೆಚ್ಚಿಸಿದ್ರು.. ಇನ್ನು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಮಂಗಳವಾರ ನಡೆಯಲಿದೆ. ರಾಜ್ಯದ ಇತರಡೆಗಿಂತಲೂ ಇಲ್ಲಿನ ರಂಗ ಪಂಚಮಿ ವಿಶೇಷತೆಯಿಂದ ಕೂಡಿರುತ್ತೆ. ಅದರಲ್ಲೂ ಹಲಗಿ ಹಬ್ಬ ಆಚರಣೆಯಿಂದಾಗಿ ಹೋಳಿ ಹಬ್ಬದ ಮೆರುಗು ದ್ವಿಗುಣಗುಳ್ಳುವಂತೆ ಮಾಡುತ್ತೆ...ಮೂರುಸಾವಿರ ಮಠದ ಮೈದಾನದಿಂದ ಆರಂಭವಾದ ಜಗ್ಗಲಗಿ ಹಬ್ಬದ ಮೆರವಣಿಗೆ ಕೊಪ್ಪಿಕರ್ ರಸ್ತೆ, ದುರ್ಗದ ಬೈಲ್, ರಾಧಾಕೃಷ್ಟ ಗಲ್ಲಿ, ವೀರಾಪುರ ರಸ್ತೆ, ದಾಜೀಬಾನ್ ಪೇಟ್ ವೃತ್ತದ ಮುಖಾಂತರ ಹಲಗಿ ಹಳೇ ಹುಬ್ಬಳ್ಳಿಯ ದುರ್ಗದ್ ಬೈಲ್ ವರೆಗೂ ಸಾಗಿತು.