ಅಕಾಲಿಕ ಮಳೆಯಿಂದ ಹಳ್ಳ ಕೆರೆ ತುಂಬಿ ಹರಿಯುತ್ತವೆ
ಧಾರಕಾರ ಸುರಿತ್ತಿರುವ ಮಳೆಯಿಂದ ಬೆಳೆ ಹಾನಿ ಆಗಿದ್ದ ಅಲ್ಲದೆ, ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಿಂಗಾರು ಬಿತ್ತನೆ ರೈತರು ಜೋರು ಮಾಡಿದ್ದರು. ಅದ್ರಂತೆ ಬಿತ್ತನೆ ಮಾಡಿದ ಫಸಲು ಜೋರಾಗಿ ಬಂದಿತ್ತು. ಆದ್ರೆ ನಿನ್ನೆ ಸುರಿದ ಮಳೆಗೆ ಎಲ್ಲಾ ಬೆಳೆ ಹಾನಿಯಾಗಿ ಹೋಗಿದೆ. ಅದ್ರಂತೆ ಧಾರವಾಡ ತಾಲೂಕಿನ ಅಮ್ಮಿನಭಾವಿ, ಕರಡಿಗುಡ್ಡ, ಯಾದವಾಡ, ಹಾರೋ ಬೆಳವಡಿ ಸೇರಿದಂತೆ ಕವಲಗೇರಿಯಲ್ಲಿ ಮಳೆ ಅಬ್ಬರ ಇಂದು ಕೂಡಾ ಜೋರಾಗಿದ್ದು ಸುತ್ತಮುತ್ತಲಿನ ಹಳ್ಳ ಕೆರೆಗಳು ತುಂಬಿ ಹರಿಯುತ್ತಿದೆ. ಹಳ್ಳದಲ್ಲಿ ನೀರು ಹೆಚ್ಚಾಗಿ ಜಮೀನಿಗೆ ನುಗ್ಗಿ ಬೆಳೆಯಲ್ಲಾ ಕೊಚ್ಚಿ ಹೋಗಿದೆ. ಬೆಳೆ ಹಾನಿಯಿಂದ ರೈತರ ಪರಿಸ್ಥಿತಿ ಹದಗೆಟ್ಟು ಹೋಗಿದೆ...