ಧಾರವಾಡ ಮೂಕಾಂಬಿಕಾ ನಗರದ ರಸ್ತೆ ಹೇಳೋರಿಲ್ಲ, ಕೇಳೋರಿಲ್ಲ

ಪೇಡಾನಗರಿ ಧಾರವಾಡಕ್ಕೆ ತನ್ನದೇ ಆದಂತಹ ಸ್ಥಾನಮಾನ ಇದೆ. ಅಲ್ಲದೇ ವಿದ್ಯಾ ಕಾಶಿ ಎಂದು ಬಿರುದ್ದ ಪಡೆದುಕೊಂಡಿದೆ. ಧಾರವಾಡ ಅಂತಾ ಹೆಸರು ಪ್ರಸ್ತಾಪ ಆದಗ್ ಕೇಳುಗರು, ನೋಡುಗರ ಗಮನ ಸೆಳೆಯುವ ಹಾಗೇ ಮಾಡಿದೆ. ಆದ್ರೆ ಧಾರವಾಡ ಹೊರವಲಯದ ಕೆಲವು ನಗರಗಳಲ್ಲಿ ರಸ್ತೆ ನೋಡಿದ್ರೇ ಹೇಳೋರಿಲ್ಲ, ಕೇಳೋರಿಲ್ಲ ಅನ್ನುವ ಸ್ಥಿತಿ ಉದ್ಭವ ಆಗಿಬಿಟ್ಟಿದೆ.ಧಾರವಾಡದ ಮೂಕಾಂಬಿಕಾ ನಗರದ ರಸ್ತೆಗಳು ಬರೀ ತಗ್ಗು ಗುಂಡಿಗಳಿಂದ ತುಂಬಿ ಹೋಗಿವೆ. ಅದ್ರಲ್ಲೋ ಇವಾಗ್ ಮಳೆರಾಯನ ಆರ್ಭಟ ರಸ್ತೆಯಲ್ಲಿ ಇರುವ ಗುಂಡಿಗಳ ತುಂಬಾ ನೀರು ನಿಂತು ವಾಹನ ಸವಾರರು ಹರಸಾಹಸದಲ್ಲಿ ರಸ್ತೆ ದಾಟುತ್ತಿದ್ದಾರೆ. ಇನ್ನು ಕೆಲವು ಬೈಕ್ ಸವಾರರು ತಗ್ಗುಗಳಲ್ಲಿ ಪಲ್ಟಿ ಹೊಡಿಯುತ್ತಿದ್ದಾರೆ. ಇದರ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರು ಮನವಿ ನೀಡಿದ್ರು.ವರ್ಷಗಳು ಕಳೆದ್ರು ರಸ್ತೆ ಸರಿಪಡೆಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.