ಜನರ ಸೇವೆ ಮಾಡ್ತೀವಿ ಅಂತಲೇ ಪ್ರಮಾಣ ವಚನ ಸ್ವೀಕಾರ ಮಾಡೋ ಜನ ನಾಯಕರು ಜನರಿಂದ ಆಯ್ಕೆಯಾದ ಮೇಲೆ ಜನರನ್ನ ತಿರುಗಿ ಸಹ ನೋಡೋದಿಲ್ಲ. ಆದರೆ ಅಧಿಕಾರ ಕಳೆದು ಕೊಂಡ ತಕ್ಷಣ ಕ್ಷೇತ್ರದ ಜನರ ಮೇಲೆ ಪ್ರೀತಿ ಉಕ್ಕಿ ಹರೆಯುತ್ತದೆ. ಬಿಟ್ಟಿ ಪ್ರಚಾರ ಪಡೆಯುವ ಭರದಲ್ಲಿ ಉಚಿತ ಅರೋಗ್ಯ ತಪಾಸಣೆ ಹಾಗೂ ಅಂಬ್ಯುಲನ್ಸ್ ಸೇವೆ ಆರಂಭಿಸಿ ಜನರ ಪ್ರೀತಿಗಳಿಸಲು ಮುಂದಾಗತಾರೆ. ಆದರೆ ಅದೇ ಪ್ರೀತಿ ಈಗ ವಿಷವಾಗಿ ಜನರ ಜೀವದ ಜೊತೆ ಚೆಲ್ಲಾಟ ಅಡುವಂತೆ ಮಾಡಿದೆ. ಬರ್ರಿ ಅಂತಹ ನಾಯಕರ ಕಥೆಯನ್ನ ನಾವು ನಿಮಗೆ ತೋರಸ್ತಿವಿ. ಇದು ಓರ್ವ ರಾಜಕಾರಣಿಗೆ ಮಾತ್ರ ಸಂಬಂಧಿಸಿದ ಸ್ಟೋರಿ ಅಲ್ಲ. ಇಡೀ ರಾಜ್ಯದ ಜನಪ್ರತಿನಿಧಿಗಳೇ ಈ ಸ್ಟೋರಿಯನ್ನ ನೋಡಲೇಬೇಕು. ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದ ಜನರಂತೂ ನೋಡಲೇಬೇಕಾದ ಸತ್ಯಸಂಗತಿಯಿದು. ಹೌದು ಇದು ಮಾಜಿ ಸಚಿವ ಸಂತೋಷ್ ಲಾಡ್ ಅವರ ಕರ್ಮ ಕಾಂಡ. ಗಣಿ ಧಣಿ ಲಾಡ್ ಸಾಹೇಬರು ಶಾಸಕರಾಗಿದ್ದಾಗ ಕ್ಷೇತ್ರದ ಜನರ ಕೈಗೆ ಸಿಗತಾನೆಯಿರಲಿಲ್ಲ. ಇಲ್ಲಿ ಸಾಹೇಬರ ಪಿ. ಎ ಗಳದ್ದೇ ದರ್ಬಾರ ನಡೆಯುತ್ತಿತ್ತು. ಇದರಿಂದ ಬೇಸತ್ತ ಜನರು ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿದ್ದಾರೆ. ಆದ್ರೆ ಪ್ರಚಾರ ಪ್ರಿಯ ಆಗಿರುವ ಲಾಡ್ ಸಾಹೇಬರು ಈ ಕ್ಷೇತ್ರಕ್ಕೆ ರಿ ಎಂಟ್ರಿ ಕೊಡಲು ಭಾರಿ ಕಸರತ್ತು ನಡೆಸಿದ್ದಾರೆ. ಕೋವಿಡ್ ಸಮಯದಲ್ಲಿ ಅಕ್ಕಿ ಕೊಟ್ಟು ಗಿಮಿಕ್ ರಾಜಕೀಯ ಮಾಡಿದ್ದ ಮಾಜಿ ಸಚಿವರು ಇದೀಗ ಉಚಿತ ಅಂಬ್ಯುಲನ್ಸ್ ಸೇವೆ ಹೆಸರಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅದೇನ ಅಂತಿರಾ ಇಲ್ಲಿ ನೋಡಿ ಪ್ರತಿ 4 ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ಲಾಡ್ ಭಾವಚಿತ್ರ ಹೊಂದಿರುವ ಆಂಬ್ಯುಲೆನ್ಸ್, ಒದಗಿಸಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಎಂ.ಬಿ.ಬಿ.ಎಸ್. ವೈದ್ಯ ರನ್ನೊಳಗೊಂಡ ತಂಡ ಬಡವರಿಗೆ ಉಚಿತ ಚಿಕಿತ್ಸೆ ನೀಡತೇವೆ ಅಂತಾ ಗಿಮಿಕ್ ಕೂಡ ಮಾಡಿದರು. ಆದರೆ ಇಲ್ಲೇ ಆಗಿದ್ದು ಎಡವಟ್ಟು ಅನುಭವ ಹಾಗೂ ವೈದ್ಯರಿಲ್ಲದ ಆರೋಗ್ಯ ತಂಡ ಓರ್ವ ಯುವಕನ ಜೀವದ ಜೊತೆ ಚೆಲ್ಲಾಟವಾಡಿರುವ ಘಟನೆ ಧಾರವಾಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಕೈಗೆ ಸಲಾಯಿನ್ ಹಚ್ಚಿಕೊಂಡು ಚಿಕಿತ್ಸೆ ಪಡೆಯಿತಾಯಿರುವ ವ್ಯಕ್ತಿ ಧಾರವಾಡ ತಾಲೂಕಿನ ನಿಗದಿ ಗ್ರಾಮದ ಶಿವಾನಂದ ಬೆಳ್ಳಿಗಟ್ಟಿ. ಕಳೆದ 6 ತಿಂಗಳಿನಿಂದ ಪಿಟ್ಸ್ ರೋಗಕ್ಕೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಹೊಸದಾಗಿ ಗ್ರಾಮಕ್ಕೆ ಬಂದ ಲಾಡ್ ಸಾಹೇಬರ ಉಚಿತ ಆರೋಗ್ಯ ಸಹಾಯವಾಣಿಯಲ್ಲಿ ಚಿಕಿತ್ಸೆ ಪಡೆದ. ಆದರೆ ಆಂಬ್ಯುಲೆನ್ಸ್ ನಲ್ಲಿ ವೈದ್ಯರಿಲ್ಲದ ಆರೋಗ್ಯ ತಂಡ ಯುವಕನಿಗೆ ಅದ್ಯಾವ ಮಾತ್ರೆ ನೀಡಿದ್ರೋ ಗೊತ್ತಿಲ್ಲ ಇಡೀ ದೇಹವೇ ಉತುಕೊಂಡು ಗುಳ್ಳೆಗಳಿಂದ ಆವರಿಸಿದೆ. ಅಷ್ಟೇ ಅಲ್ಲ ಹೊಟ್ಟೆ ನೋವು ತಾಳಲಾರದೇ ಚಟಪಡಿಸಿದ್ದಾನೆ. ಆತನನ್ನು ತತಕ್ಷಣ ಆತನ ಸಂಬಂಧಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಶಿವಾನಂದ ಏನ್ ಹೇಳತಾರೆ ಕೇಳಿ ಇನ್ನು ಸಾಮಾನ್ಯವಾಗಿ ಒಂದು ಆಂಬ್ಯುಲೆನ್ಸ್ ನಲ್ಲಿ ನುರಿತ ವೈದ್ಯರು ಸೇರಿದಂತೆ ನರ್ಸ್ ಗಳು ಇರಬೇಕು. ಆದ್ರೆ ಲಾಡ್ ಸಾಹೇಬರು ಕಳುಹಿಸಿದ ತುರ್ತು ವಾಹನದಲ್ಲಿ ಒಬ್ಬೇ ಒಬ್ಬ ಎಂಬಿಬಿಎಸ್ ಅಥವಾ ನುರಿತ ವೈದ್ಯನು ಸಹ ಇಲ್ಲದೆ ಸಿಕ್ಕ ಸಿಕ್ಕ ಮಾತ್ರೆಗಳನ್ನ ವಾಹನದಲ್ಲಿದ್ದ ಸಿಬ್ಬಂದಿ ನೀಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಒಟ್ಟಾರೆ 50ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಲಾಡ್ ಅವರ ಉಚಿತ ಆಂಬ್ಯುಲೆನ್ಸ್ ಸೇವೆ ಸಿಕ್ಕಿದೆ. ಆದ್ರೆ ವೈದ್ಯರೇ ಇಲ್ಲದ ಈ ವಾಹನದಲ್ಲಿ ಗ್ರಾಮೀಣ ಜನರಿಗೆ ಅದ್ಯಾವ ಮಾತ್ರೆಗಳನ್ನ ನೀಡಿ ಗುಣಪಡಿಸಿದ್ರೋ ದೇವರೇ ಬಲ್ಲ. ಇಂತಹ ಗಿಮಿಕ್ ರಾಜಕಾರಣ ಬದಲು ಕ್ಷೇತ್ರದಲ್ಲಿ ಓಡಾಡಿಕೊಂಡು ಗ್ರಾಮೀಣ ಜನರಿಗೆ ಉತ್ತಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಿದ್ದರೆ ಇವತ್ತು ಮಾಜಿ ಆಗೋ ಪ್ರಮಯೇ ಬರ್ತಾ ಇರಲಿಲ್ಲ. ಆದರೆ ವೀಕ್ಷರೇ ಈ ಪ್ರಕರಣವನ್ನು ನಾವು ಇಷ್ಟಕ್ಕೆ ಬಿಡಲ್ಲ. ಮಾಜಿ ಸಚಿವ ಲಾಡ್ ಅವರನ್ನು ಸಂಪರ್ಕಿಸಿ ಈ ಕುರಿತು ಚರ್ಚೆ ನಡೆಸುತ್ತೇವೆ. ಈ ಸ0ವಾದದ ಡಿಟೇಲ್ ವರದಿಯನ್ನು ಮುಂದಿನ ಎಪಿಸೋಡನಲ್ಲಿ ತೋರಿಸ್ತೀವಿ.