ಯುವ ಜನತೆಯ ನೆಚ್ಚಿನ ಲಕ್ಷ್ಯ ಚಲನಚಿತ್ರ | Dharwad | Movie | Lakshya |

ಸಮಾಜ ಮುಖಿ ವಿಷಯಗಳನ್ನು ಎತ್ತಿ ತೋರಿಸಿ, ಜನರಿಗೆ ಉತ್ತಮ ಸಂದೇಶವನ್ನು ಸಾರುತ್ತಿರುವ ಲಕ್ಷ್ಯ ಚಲನಚಿತ್ರ ಉತ್ತರ ಕರ್ನಾಟಕದಲ್ಲಿ ದಿನೆ ದಿನೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಿರಿಯ ನಾಗರಿಗರಿಂದ ಮಹಿಳೆಯರಿಂದ ಪ್ರಶಂಸೆಗೆ ಪಾತ್ರವಾದ ಲಕ್ಷ್ಯ ಈಗ ಯುವಕ ಯುವತಿಯರಿಗೂ ನೆಚ್ಚಿನ ಚಿತ್ರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ದುಡ್ಡಿನ ದರ್ಪದಿಂದ ಮೆರೆಯುವ ದುರಹಂಕಾರಿಗಳು, ಮಕ್ಕಳ ಮೇಲಿನ ನಿರ್ಲಕ್ಷ್ಯ ,ಬಡವರಿಗೆ ನ್ಯಾಯ ಹಾಗೂ ಅನ್ಯಾಯದ ಸೂಕ್ಷ್ಮ ವಿಚಾರಗಳನ್ನು ತೋರಿಸುವ ನಿಟ್ಟಿನಲ್ಲಿ ವಿಕ್ಷಕರ ಮನಸ್ಸು ಗೆಲ್ಲುತ್ತಿರು ಲಕ್ಷ್ಯ ಚಲನಚಿತ್ರ ಸಧ್ಯಕ್ಕೆ ಎಲ್ಲರ ಚರ್ಚೆಯಲ್ಲಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ವಿವಿಧೆಡೆ ಚಿತ್ರೀಕರಣ ಗೊಂಡು ಬೆಳಗಾವಿ ಕಲಾವಿದರನ್ನು ಒಳಗೊಂಡ ಲಕ್ಷ್ಯ ಚಿತ್ರದಲ್ಲಿ ಮೂಡಲನೆಯ ಶ್ರೀಕರಿ ಅಲಿಯಾಸ ಬಂಗಾರದ DC ಅಲಿಯಾಸ ಬೆಳಗಾವಿಯ ಸಂತೋಷರಾಜ ಝಾವರೆ ಅವರ ಅಭಿನಯ ಅದ್ಬುತವಾಗಿದೆ ಅವರ ಕಾಂಬಿನೇಷನ ನೀತಿನದ್ವಿ ಇವರಿಬ್ಬರ ನಟನೆ ವೀಕ್ಷಕರ ಮನಸೆಳೆಯುತ್ತಿರುವುದಂತು ಸತ್ಯ. ಒಳ್ಳೆಯ ಚಲನಚಿತ್ರ ಬಂದಾಗ ವೀಕ್ಷಕರು ಬೆನ್ನು ತಟ್ಟಿದಾಗ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿದರೆ ಉತ್ತಮ ಚಿತ್ರಗಳನ್ನು ಅವರಿಂದ ನಿರಿಕ್ಷಿಸಬಹುದು. ಲಕ್ಷ್ಯ ಚಲನಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಪ್ರತಿಕ್ರಿಯೆ ಸಿಕ್ಕಿದ್ದು ಎಲ್ಲರೂ ಒಟ್ಟಾಗಿ ಕುಳಿತು ಕೊಂಡು ನೋಡುವ ಒಳ್ಳೆಯ ಸದಭಿರುಚಿಯ ಚಲನಚಿತ್ರವಾಗಿದೆ. ಒಟ್ಟಿನಲ್ಲಿ ಲಕ್ಷ್ಯ ಚಲನಚಿತ್ರ ಮನೆಮಾತಾಗಲಿ ಅಂತ