ಈಜಲು ಹೋಗಿ ಇಬ್ಬರು ಬಾಲಕರು ಸಾವು
ಹುಬ್ಬಳ್ಳಿಯ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೇವಣಸಿದ್ದಯ್ಯಾ ಹಿರೇಮಠ ಎಂಬುವವರ ಜಮೀನನ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಬ್ಯಾಹಟ್ಟಿ ಗ್ರಾಮದ ಜಮೀನಿನ ಕೃಷಿ ಹೊಂಡದ ಕ್ವಾರಿಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವನಪ್ಪಿದ್ದಾರೆ. ಇನ್ನು ಮೃತ ವ್ಯಕ್ತಿಗಳಾದ ಚಂದ್ರು ಮರಿಬಸನಗೌಡರ( 7) ಗೌತಮ ಮರಿಬಸನಗೌಡರ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ....