RSS ಬೈಠಕ್ ಇಂದಿನಿಂದ ಆರಂಭ, ಮೋಹನ ಭಾಗವತ್ ಭಾಗಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಇಂದಿನಿಂದ ಆರಂಭಗೊಂಡಿದೆ. ಮೂರು ದಿನಗಳ ಕಾಲ ಈ ಬೈಠಕ್ ನಡೆಯಲಿದೆ. ಸಂಘದ ಅಖಿಲ ಭಾರತೀಯ, ಕ್ಷೇತ್ರೀಯ ಹಾಗೂ ಪ್ರಾಂತ್ಯ ಸ್ತರದ ಕಾರ್ಯಕರ್ತರು ಸೇರಿ ಒಟ್ಟು 350 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಬೈಠಕ್ಗೆ ಆರ್ಎಸ್ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್, ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಚಾಲನೆ ನೀಡಿದರು. ಸರ ಸಂಘಚಾಲಕರ ನೇತೃತ್ವದಲ್ಲಿಯೇ ಮೂರು ದಿನಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಜೊತೆಗೆ 2025ಕ್ಕೆ ಸಂಘಕ್ಕೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಆಚರಣೆಯ ರೂಪರೇಷೆಗಳ ಬಗೆಗೂ ಚರ್ಚೆ ನಡೆಯಲಿದೆ. ಇದೇ ವೇಳೆ ರಾಜಕೀಯ ನಾಯಕರು ಭೇಟಿ ನೀಡುವ ಸಾಧ್ಯತೆಯಿದೆ.