ನ್ಯಾಯಮೂರ್ತಿಗಳ ನೇಮಕ ವಿಳಂಬ; ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ನ್ಯಾಯಮೂರ್ತಿಗಳ ನೇಮಕ ವಿಳಂಬ; ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಹೊಸದಿಲ್ಲಿ: ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಮತ್ತೆ ಚಾಟಿ ಬೀಸಿದೆ. ಹತ್ತು ದಿನಗಳ ಹಿಂದೆ ಜಡ್ಜ್‌ ನೇಮಕಾತಿಗೆ ಕೊಲಿಜಿಯಂ ನೆಪದಲ್ಲಿ ವಿಳಂಬ ಮಾಡುತ್ತಿರುವ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪೀಠ, ಗುರುವಾರ ಮತ್ತೆ ಈ ದೇಶದ ನೆಲದ ಕಾನೂನಿಗೆ ಬದ್ಧವಾಗಿ ನಡೆದುಕೊಳ್ಳಿ ಎಂದಿದೆ. ಯಾರೋ ಒಂದಿಷ್ಟು ಮಂದಿ ಕೊಲಿಜಿಯಂ ಬಗ್ಗೆ ಋುಣಾತ್ಮಕವಾಗಿ ಮಾತನಾಡಿದ ಮಾತ್ರಕ್ಕೆ ಕಾನೂನು ಬದಲಾಗುವುದಿಲ್ಲಎಂದು ಹೇಳಿದೆ.