ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್ ದರ ಶೇ.10 ರಷ್ಟು ಇಳಿಕೆ ಸಾಧ್ಯತೆ

ಮನೆ ಕಟ್ಟೋರಿಗೆ ಗುಡ್ ನ್ಯೂಸ್ : ಸಿಮೆಂಟ್ ದರ ಶೇ.10 ರಷ್ಟು ಇಳಿಕೆ ಸಾಧ್ಯತೆ

ವದೆಹಲಿ : ಫೆಬ್ರವರಿ 18 ರಂದು ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು, ಸಿಮೆಂಟ್ ಮೇಲಿನ ದರಗಳನ್ನು ಕಡಿತಗೊಳಿಸಲು ನಿರ್ಧರಿಸಲಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.

ಫೆಬ್ರವರಿ 18ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದೆ. ಹಣಕಾಸು ಸಚಿವರು ಘೋಷಿಸಿದಂತೆ ಸಿಮೆಂಟ್ ಮೇಲಿನ ದರ ಕಡಿತದ ಬಗ್ಗೆ ನಿರ್ಧರಿಸಲು ಫಿಟ್ ಮೆಂಟ್ ಸಮಿತಿ ಸಭೆ ಸೇರಲಿದೆ. ಪ್ರಸ್ತುತ, ಸಿಮೆಂಟ್ ಮೇಲೆ ಶೇಕಡಾ 28 ರಷ್ಟು ಜಿಎಸ್ಟಿ ಇದೆ ಎಂದು ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ.

ಮೂಲಸೌಕರ್ಯ ವಲಯಕ್ಕೆ ಪ್ರಮುಖ ಇನ್ಪುಟ್ ಆಗಿರುವ ಸಿಮೆಂಟ್ ಮೇಲಿನ 28% ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸುವ ಉದ್ಯಮದ ಬೇಡಿಕೆಯನ್ನು ಜಿಎಸ್ಟಿ ಕೌನ್ಸಿಲ್ ಅಡಿಯಲ್ಲಿ ಫಿಟ್ಮೆಂಟ್ ಸಮಿತಿಗೆ ಕೊಂಡೊಯ್ಯಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸೂಚಿಸಿದ್ದರು. ಹೀಗಾಗಿ ಫೆ. 18 ರಂದು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಬೆಲೆಯಲ್ಲಿ ಕಡಿಮೆ ಮಾಡುವ ಸಾಧ್ಯತೆ ಇದ್ದು, ಪ್ರತಿ ಚೀಲಕ್ಕೆ 30 ರಿಂದ 40 ರೂ.ಕಡಿತವಾಗಬಹುದು ಎನ್ನಲಾಗಿದೆ.