ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಬಿಗಿ ಭದ್ರತೆ

ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಬಿಗಿ ಭದ್ರತೆ

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ನಗರದ ಮಾಣಿಕ್ ಷಾ ಪೆರೆಡ್ ಗ್ರೌಂಡ್ ನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿವರ್ಷದಂತೆ ಈ ವರ್ಷ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುವುದು.ಕರ್ನಾಟಕ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಇನ್ನು ಪರೇಡ್‌ನಲ್ಲಿ ಕೇರಳ ರಾಜ್ಯ ಪೊಲೀಸರನ್ನು ಪ್ರತಿನಿಧಿಸುವ ತಂಡ ಸೇರಿದಂತೆ ಒಟ್ಟು 38 ತಂಡಗಳು ಮತ್ತು 1,520 ಜನರು ಭಾಗವಹಿಸಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದು, ಬಳಿಕ ಗಣರಾಜ್ಯೋತ್ಸವ ಭಾಷಣ ಮಾಡಲಿದ್ದಾರೆ. ಗಣ್ಯರು, ಅತಿಗಣ್ಯರು, ಇತರೆ ಇಲಾಖೆಯವರು ಹಾಗೂ ಸಾರ್ವಜನಿಕರು ಸೇರಿ ಸುಮಾರು 7 ಸಾವಿರ ಮಂದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್, ರಕ್ಷಣಾ ಪಡೆಗಳು, ಸಿಆರ್‌ಪಿಎಫ್, ಎನ್‌ಸಿಸಿ ಕೆಡೆಟ್‌ಗಳು, ಸ್ಕೌಟ್ಸ್, ಗೈಡ್ಸ್, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ 38 ತಂಡಗಳಿಂದ ಪಥಸಂಚಲನ ನಡೆಯಲಿದೆ.