ಚಂಡ್ ಹೂವು ಮಾರ್ಕೆಟ್ ನಲ್ಲಿ ಕೇಳವರೇ ಇಲ್ಲ, ಹಿಂಗೇ ಆದ್ರೇ ಹೂವು ಬೆಳದ ರೈತ ಪರಿಸ್ಥಿತಿ ಏನೊ. | Flowers | Dharwad |

ಧಾರವಾಡ.
 
ಚಂಡ್ ಹೂವು ಮಾರ್ಕೆಟ್ ನಲ್ಲಿ ಕೇಳವರೇ ಇಲ್ಲ, ಹಿಂಗೇ ಆದ್ರೇ ಹೂವು ಬೆಳದ ರೈತ ಪರಿಸ್ಥಿತಿ ಏನೊ.
 
ಹಬ್ಬಗಳು ಬಂದರೆ ಎಲ್ಲರಿಗೂ ಸಂಭ್ರಮವೂ ಸಂಭ್ರಮ. ಅದ್ರಲ್ಲಿಯೂ ಹಬ್ಬಕ್ಕಾಗಿಯೇ ಹೂವು, ಹಣ್ಣು, ತರಕಾರಿ ಬೆಳೆಯೋ ರೈತರಿಗಂತೂ ಆಯಾ ಹಬ್ಬಗಳ ಸಂದರ್ಭದಲ್ಲಿ ಬಂಪರ್ ಬೆಲೆಯೂ ಬರೋದುಂಟು. ಆದ್ರೆ ಸದ್ಯ ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹಾಕಿರೋದು ಅನೇಕರ ಕೆಂಗಣ್ಣಿಗೆ ಗುರಿ ಆಗಿರೋದು ಒಂದೇಡೆಯಾದ್ರೆ ಮತ್ತೊಂದೆಡೆ ಹೂವು ಬೆಳೆದ ರೈತರ ಕಣ್ಣೀರು ಹಾಕುವಂತಾಗಿದೆ. ಕಣ್ಣು ಹಾಯಿಸಿದ ಕಡೆಯಲ್ಲೆ ಕೇಸರಿ ಬಣ್ಣದಿಂದ ಕಣ್ಮನ ಸೆಳೇಯುವ ಹೂವ್ವೆ ಹೂವು. ಇದು ಧಾರವಾಡ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಸದ್ಯ ಕಂಡು ಬರುತ್ತಿರುವ ದೃಶ್ಯ. ಸಾಮಾನ್ಯವಾಗಿ ಧಾರವಾಡ ಜಿಲ್ಲೆಯ ಕೆಲವೊಂದು ಭಾಗದಲ್ಲಿ ಶ್ರಾವಣ ಮಾಸ ಹಾಗೂ ಗಣೇಶೋತ್ಸವವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚೆಂಡು ಹೂವು ಬೆಳೆಯುತ್ತಾರೆ. ಈ ಹೂವಿಗೆ ಗೊಂಡೆ ಹೂವು ಅಂತಾನೂ ಕರೆಯೋದುಂಟು. ಆದ್ರೆ ಕರೊನಾ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಏನೂ ಧಾರ್ಮಿಕ ಕಾರ್ಯಕ್ರಮಗಳೇ ನಡೆಯಲಿಲ್ಲ. ಹೀಗಾಗಿ ಚೆಂಡು ಹೂವು ಬೆಳೆದಲ್ಲೇ ಹಾಗೆ ಉಳಿದು ಬಿಟ್ಟಿದ್ದವು. ಸದ್ಯ ಗಣೇಶೋತ್ಸವಕ್ಕಾದ್ರೂ ಒಂದಷ್ಟು ಬೇಡಿಕೆ ಬರುತ್ತೆ ಅಂದುಕೊಂಡಿದ್ದರಾದರೂ ಅದ್ದೂರಿ ಹಬ್ಬಕ್ಕೆ ಈಗ ಕಡಿವಾಣ ಬಿದ್ದ ಕಾರಣಕ್ಕೆ ಈ ಹೂವು ಕೇಳೋರೆ ಇಲ್ಲ. ಹೀಗಾಗಿ ಬಣ್ಣ ತಯಾರಿಸೋ ಕಾರ್ಖಾನೆಗೆ ಕೇವಲ 10 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಸಾಮಾನ್ಯ ಹಬ್ಬದ ದಿನಗಳಲ್ಲಿ ಈ ಚೆಂಡು ಹೂವು ಕೆಜಿಗೆ 80ರೂಪಾಯಿವರೆಗೂ ದರ ಇರುತ್ತೆ. ಇನ್ನು ಗಣೇಶ ಹಬ್ಬ ಸಂದರ್ಭದಲ್ಲಿಯಂತೂ ಒಂದೊಂದು ಸಲ ನೂರು ರೂಪಾಯಿವರೆಗೂ ದರ ಹೋಗಿದೆ. ಹೀಗಾಗಿಯೇ ರೈತರು ಹಬ್ಬಕ್ಕೆ ಸರಿಯಾಗಿ ಹೂವು ಕೈಗೆ ಬರುವಂತೆ ಖರ್ಚು ಮಾಡಿ ಬೆಳೆಸಿದ್ದಾರೆ. ಜೊತೆಗೆ ಕರೊನಾ ಕೇಸ್ಗಳು ಸಹ ಕಡಿಮೆಯಾಗ್ತಾ ಇರೋ ಕಾರಣಕ್ಕೆ ಅದ್ದೂರಿ ಹಬ್ಬ ಆಗಬಹುದು ಅಂತಾನೇ ತಿಳಿದುಕೊಂಡಿದ್ದರಂತೆ. ಆದ್ರೆ ಈಗ ಮಾರ್ಕೆಟ್ಗೆ ತೆಗೆದುಕೊಂಡು ಹೋದ್ರೆ ಹಾಗೆ ವಾಪಸ್ ತರುವಂತಾಗಿದೆಯಂತೆ. ಹೀಗಾಗಿ ಈ ಚೆಂಡು ಹೂವಿನಿಂದ ಬಣ್ಣ ತಯಾರಿಸೋ ಕಂಪನಿ ಹಾಗೂ ಇತರೆ ದ್ರವ್ಯ ತಯಾರಿಸಲು ಬಳಸುವ ಕಾರ್ಖಾನೆಗಳಿಗೆ ಈ ಹೂವನ್ನು ಕಳುಹಿಸುತ್ತಿರುವರಾದರೂ ಅದು ಕೂಡ ಕೆಜಿಗೆ ಕೇವಲ 10 ರೂಪಾಯಿಯಂತೆ. ಹೀಗಾಗಿ ಎಲ್ಲವೂ ಹಾಕಿದ ಬಂಡವಾಳ ಹೋಗಲಿ, ಇದನ್ನು ಕಾಲಿ ಮಾಡಿಸೋದಕ್ಕೂ ಹಣ ಖರ್ಚು ಮಾಡೋ ಸ್ಥಿತಿ ಬಂದಿದೆ ಅನ್ನೋದು ರೈತರ ಅಳಲು. ಒಟ್ಟಾರೆಯಾಗಿ ಒಂದು ಹಬ್ಬ ಅಂತಾದ್ರೆ ಆ ಹಬ್ಬದಲ್ಲಿ ಸಂಭ್ರಮಿಸೋ ಜನ ಒಂದೇಡೆಯಾದ್ರೆ ಆ ಸಂಭ್ರಮದ ಹಿಂದೆ ರೈತರ ಬೆಳೆಗೆ ಒಂದಷ್ಟು ಬೆಲೆ ಸಿಕ್ಕು, ಅವರ ಜೀವನೋಪಾಯವೂ ನಡೆಯುತ್ತದೆ. ಆದ್ರೀಗ ಸರ್ಕಾರ ಕರೊನಾ ಕಾರಣಕ್ಕೆ 11 ದಿನಗಳ ಗಣೇಶ ಉತ್ಸವಕ್ಕೆ ನಿರ್ಬಂಧ ಹಾಕಿರೋದಿಂದ್ರ ಹೂವು ಮಾತ್ರವಲ್ಲ, ಬೇರೆ ಬೇರೆ ಬೆಳೆ ಬೆಳೆದ ರೈತರು ಸಹ ಕಣ್ಣೀರು ಹಾಕುವಂತಾಗಿದೆ