ಮತಗಳನ್ನು ನಿರೀಕ್ಷಿಸದೆ ಮುಸ್ಲಿಮರನ್ನು ತಲುಪಿ: ಬಿಜೆಪಿಗೆ ಪ್ರಧಾನಿ ಮೋದಿ ಸೂಚನೆ

ಮತಗಳನ್ನು ನಿರೀಕ್ಷಿಸದೆ ಮುಸ್ಲಿಮರನ್ನು ತಲುಪಿ: ಬಿಜೆಪಿಗೆ ಪ್ರಧಾನಿ ಮೋದಿ ಸೂಚನೆ
ತಗಳನ್ನು ನಿರೀಕ್ಷಿಸದೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ತಲುಪುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ. ನವದೆಹಲಿ: ಮತಗಳನ್ನು ನಿರೀಕ್ಷಿಸದೆ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ತಲುಪುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಗಡಿ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಪಕ್ಷವನ್ನು ಬಲಪಡಿಸುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಇದನ್ನು ಓದಿ:ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಎಲ್ಲಾ ಧರ್ಮದ ಜನರನ್ನು ತಲುಪಲು ಒತ್ತು ನೀಡಿದ್ದಾರೆ. ವಿಶ್ವವಿದ್ಯಾನಿಲಯಗಳು ಮತ್ತು ಚರ್ಚ್ಗಳಿಗೆ ಭೇಟಿ ನೀಡುವಂತೆ ಪಕ್ಷದ ಸದಸ್ಯರಿಗೆ ಸೂಚಿಸಿದ್ದಾರೆ. "ಪ್ರತಿಯಾಗಿ ಮತಗಳನ್ನು ನಿರೀಕ್ಷಿಸದೆ ಪ್ರಜ್ಞಾವಂತ ಮುಸ್ಲಿಮರನ್ನು, ಬೋಹ್ರಾ ಸಮುದಾಯ, ಮುಸ್ಲಿಂ ವೃತ್ತಿಪರರು ಮತ್ತು ವಿದ್ಯಾವಂತ ಮುಸ್ಲಿಮರನ್ನು ಭೇಟಿಯಾಗುವಂತೆ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು" ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಯಾವುದೇ ಸಮುದಾಯದ ವಿರುದ್ಧ ಅನಗತ್ಯ ಟೀಕೆಗಳನ್ನು ಮಾಡದಂತೆ ಬಿಜೆಪಿ ನಾಯಕರಿಗೆ ಮೋದಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.