ಪುರಸಭೆ ಮುಖ್ಯಾಧಿಕಾರಿಗಳೇ ಎಲ್ಲಿದ್ದೀರಾ? ಬಂಗಾರಪ್ಪ ಬಡಾವಣೆ ನಿವಾಸಿಗಳ ಮೇಲೆ ಯಾಕಿಷ್ಟು ನಿರ್ಲಕ್ಷ್ಯ | Anigere |
ಅಣ್ಣಿಗೇರಿ ನಗರದ ಹೊರವಲಯದಲ್ಲಿರುವ ಬಂಗಾರಪ್ಪ ಬಡಾವಣೆಯ ನಿವಾಸಿಗಳಿಗೆ ನೀರು ಶುದ್ಧೀಕರಣ ಮಾಡುವ ಕೇಂದ್ರವಿದ್ದರೂ ಶುದ್ದ ನೀರು ಕುಡಿಯುವ ಯೋಗ್ಯ ಇನ್ನೂ ಇಲ್ಲದಂತಿದೆ. ಶುದ್ಧ ನೀರಿನ ಘಟಕದ ಮುಂದೆ ಕಸ, ಕಂಟಿ, ಬೆಳೆದು ಹೊಲಸು ನೀರು ನಿಂತು ದುರ್ವಾಸನೆ ಬರುತ್ತಿದೆ. ಸುಮಾರು ಎರಡು ವರ್ಷಗಳ ಹಿಂದೆ ಶುದ್ಧ ನೀರಿನ ಘಟಕ ನಿರ್ಮಿಸಿದ್ದರೂ ಇದುವರೆಗೂ ಉದ್ಘಾಟನೆಯಾಗಿಲ್ಲ. ಸಾರ್ವಜನಿಕರ ಶೌಚಾಲಯ ಇದ್ದರೂ ಕೂಡ ಉಪಯೋಗಕ್ಕೆ ಬಾರದಾಗಿದೆ. ಮಲಮೂತ್ರ ವಿಸರ್ಜನೆ ಮಾಡಲು ಬಡಾವಣೆಯ ಮಹಿಳೆಯರು ಶೌಚಾಲಯವಿಲ್ಲದೇ ತೊಂದರೆಯಾಗುತ್ತಿದೆ. ಬಂಗಾರಪ್ಪ ಬಡಾವಣೆಯ ನಿವಾಸಿಗಳು ಸಾಕಷ್ಟು ಬಾರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪುರಸಭೆಯ ಅಧಿಕಾರಿಗಳಿಗೆ ಇದರ ಬಗ್ಗೆ ಹೇಳಿದರೂ ಕೂಡ ಅಧಿಕಾರಿಗಳ ನಿರ್ಲಕ್ಷ ತೋರುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.