ತಗ್ಗುತ್ತಿರುವ ಬಾವಲಿಗಳ ಸಂಖ್ಯೆ: ಪರಿಸರ ವ್ಯವಸ್ಥೆಗೆ ಮಾರಕ
ನವದೆಹಲಿ: ವಿಶ್ವದಲ್ಲಿ ಬಾವಲಿಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಿದೆ. ಬಾವಲಿಗಳು ಮಾನವನ ಜೀವನದ ಮೇಲೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಕ್ಷಿಣಿಸುತ್ತಿರುವ ಬಾವಲಿಗಳ ಸಂಖ್ಯೆ ಆತಂಕಕಾರಿಯಾಗಿದೆ.
ಬಾವಲಿಗಳು ರಾತ್ರಿ ಮಾತ್ರ ಕ್ರಿಯಾಶೀಲವಾಗಿರುತ್ತವೆ.
ಪರಿಸರದಲ್ಲಿ ಪೋಷಕಾಂಶಗಳ ಚಕ್ರದ ಸೂಕ್ತ ನಿರ್ವಹಣೆ ಹಾಗೂ ಗಿಡಗಳಲ್ಲಿ ಪರಾಗಸ್ಪರ್ಶಕ್ಕೆ ಅವುಗಳು ಸಹಕಾರಿಯಾಗಿವೆ. ಬಾವುಲಿಗಳು ಕೃಷಿ ಕೀಟಗಳನ್ನು ತಿನ್ನುತ್ತವೆ. ಹಾಗಾಗಿ ಇದು ಕೀಟನಾಶಕಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ. ಅವುಗಳು ನಮ್ಮ ಪರಿಸರ ವ್ಯವಸ್ಥೆಗೆ ಅಗಾಧವಾದ ಸಹಾಯವನ್ನು ಮಾಡುತ್ತವೆ.
ಹಲವು ದಶಕಗಳಿಂದ ಉತ್ತರ ಅಮೆರಿಕದಲ್ಲಿ ಬಾವಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇತರೆ ದೇಶಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬೆಕ್ಕುಗಳು ಬಾವಲಿಗಳನ್ನು ಕೊಂದು ತಿನ್ನುತ್ತವೆ.
ಅಲ್ಲದೇ ಇತರ ಕಾರಣಗಳಿಗೂ ಅವುಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಬಾವಲಿಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಕಾಳಜಿ ಹೆಚ್ಚಾಗುವಂತೆ ಮಾಡಿದೆ.