ಮತದಾರರ ಪಟ್ಟಿ ಕಳವು ಆರೋಪ:ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

ಮತದಾರರ ಪಟ್ಟಿ ಕಳವು ಆರೋಪ:ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳೂ ಶಾಮೀಲು!

ಬೆಂಗಳೂರು: ಚಿಲುಮೆಯಿಂದ ಮತದಾರರ ಪಟ್ಟಿ ಕಳವು ಪ್ರಕರಣದಲ್ಲಿ ರಾಜಕಾರಣಿಗಳ ಕೈವಾಡವಿರುವುದು ಬಯಲಾಗಿದೆ. ಚಿಲುಮೆ ಸಂಸ್ಥೆ ಜೊತೆ ರಾಜಕಾರಣಿಗಳು ಶಾಮೀಲುಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಲುಮೆ ಸಂಸ್ಥೆ ಜೊತೆ ಪ್ರಭಾವಿ ರಾಜಕಾರಣಿಗಳ ಕರಾರು ಪತ್ರ ಪತ್ತೆಯಾಗಿದ್ದು, ಇಬ್ಬರು ರಾಜಕಾರಣಿಗಳು ಚುನಾವಣಾ ಸಮೀಕ್ಷೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಪ್ರಭಾವಿ ರಾಜಕಾರಣಿಯ ಲೆಟರ್ ಹೆಡ್‍ಗಳು ಕೂಡ ಪತ್ತೆಯಾಗಿದೆ.

11ಕ್ಕೂ ಹೆಚ್ಚು ರಾಜಕಾರಣಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳ ವಿಸಿಟಿಂಗ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 7ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಡೆಸಿದ ಕೆಲವು ಕ್ಷೇತ್ರಗಳ ಸಮೀಕ್ಷೆಗಳ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಪ್ರಮುಖ ಸಂಸ್ಥೆಯ ಲೆಟರ್‍ಹೆಡ್‍ಗಳು ಕೂಡ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.