ರಾಜ್ಯದ ಹವಾಮಾನ ವರದಿ

ಸಿಲಿಕಾನ್ ಸಿಟಿಯಲ್ಲಿ ಊಟಿಯ ಕೂಲ್ ಕೂಲ್ ವಾತಾವರಣ ಮಾಯವಾಗಿದ್ದು, ಬಿಸಿಲು ತಲೆಎತ್ತಿದೆ. ಬೆಂಗಳೂರಿನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಮಾಂಡೋಸ್ ಚಂಡಮಾರುತ ಎಫೆಕ್ಟ್ನಿಂದಾಗಿ ಅಬ್ಬರಿಸಿದ್ದ ವರುಣ ರಾಜ್ಯಕ್ಕೆ ಬಿಡುವು ನೀಡಿದೆ. ಮಡಿಕೇರಿ, ಉಡುಪಿ ಹಾಗೂ ಕಾರವಾರ ಬಿಸಿಲು ಹಾಗೂ ಕೊಂಚ ಮೋಡ ಕವಿದ ವಾತಾವರಣ ಇರಲಿದೆ.