ವೈದ್ಯರ ಯಡವಟ್ಟು.! 60 ವರ್ಷದ ಮಹಿಳೆಗೆ ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ .!
ಕೇರಳದ ಕೋಝಿಕ್ಕೋಡ್ ಬಳಿಯ ಕಕ್ಕೋಡಿ ನಿವಾಸಿ ಸಜ್ನಾ ಎಂಬಾಕೆ ಬಿದ್ದು ಎಡ ಮೊಣಕಾಲಿಗೆ ಗಂಭೀರ ಗಾಯಗಳಾಗಿದ್ದು, ಕಳೆದ ಒಂದು ವರ್ಷದಿಂದ ನ್ಯಾಷನಲ್ ಆಸ್ಪತ್ರೆಯ ಆರ್ಥೋ ವಿಭಾಗದ ಮುಖ್ಯಸ್ಥ ಪಿ.ಬೆಹಿರ್ಶನ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆ ನಡೆಸಿದರೆ ನೋವು ಬೇಗ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸಜ್ನಾ ಅವರಿಗೆ ಪ್ರಜ್ಷೆಯನ್ನು ತಪ್ಪಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾರೆ. ನಂತ್ರ ವೈದ್ಯರು ಶಸ್ತ್ರಚಿಕಿತ್ಸೆ ಮುಗಿದೆ ಎಂದು ಸಜ್ನಾ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಬೆಳಿಗ್ಗೆ ಪ್ರಜ್ಞೆ ಮರಳಿದ 60 ವರ್ಷದ ಮಹಿಳೆ ಸಜ್ನಾ ಗಾಯಗೊಂಡ ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಅಘಾತಕ್ಕೊಳಗಾದರು. ವೈದ್ಯರನ್ನು ಕುಟುಂಬಸ್ಥರು ಈ ಬಗ್ಗೆ ಕೇಳಿದ್ದರು, ಅವರ ಬಲಗಾಲಿಗೂ ಗಾಯವಾಗಿದೆ ಎಂದು ಕುಟುಂಬಸ್ಥರಿಗೆ ಮನವರಿಕೆಯಾಗುವಂತೆ ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಕುಟುಂಬಸ್ಥರು ಚರ್ಚೆ ನಡೆಸಿದ್ದರು. ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧತೆ ನಡೆಸುವುದ್ದಾಗಿ ವೈದ್ಯರು ಹೇಳಿದ್ದರು ಎಂದು ಸಜ್ನಾ ಅವರ ಪುತ್ರಿ ಮಾಧ್ಯಮಗಳಿಗೆ ವರದಿ ನೀಡಿದ್ದರು. ಆದರ ಸ್ಕ್ಯಾನಿಂಗ್ ವರದಿ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸಂಬಂಧಿಕರು ವಿವರಣೆ ಕೇಳಿದಾಗ, ವೈದ್ಯರು ಉತ್ತರಿಸದೆ ತಲೆ ತಗ್ಗಿಸಿ ಕುಳಿತರು. ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು, ಬಳಿಕ ಎಡಗಾಲಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂಬುದನ್ನು ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ.
ಡಾ.ಪಿ. ಬೆಹಿರ್ಶನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿರ್ಲಕ್ಷ್ಯದ ಚಿಕಿತ್ಸೆಗಾಗಿ ಐಪಿಸಿ ಸೆಕ್ಷನ್ 336 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯಲ್ಲಿ ಇತರ ವಿಭಾಗಗಳನ್ನು ಸೇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಎಡಗಾಲಿನ ಬದಲು 60 ವರ್ಷದ ಮಹಿಳೆಯ ಬಲಗಾಲಿಗೆ ಆರ್ಥೋ ವಿಭಾಗದ ಮುಖ್ಯಸ್ಥರು ಶಸ್ತ್ರಚಿಕಿತ್ಸೆ ಮಾಡಿರುವುದು ಬಹಿರಂಗವಾಗಿದೆ.