ಕ್ಷತ್ರೀಯ ಸಮಾಜ ಒಗ್ಗಟ್ಟಿಗೆ ತಾರಾಸಿಂಗ್ ಕರೆ

ಚನ್ನಮ್ಮನ ಕಿತ್ತೂರ, ನ 13: ರಾಜ್ಯ ಕಟ್ಟಿ ಪ್ರಜೆಗಳಿಗೆ ಬೆನ್ನೆಲುಬಾಗಿ ನಿಂತವರು ಕ್ಷತ್ರಿಯರು. ಇವರ ತ್ಯಾಗ, ಬಲಿದಾನಗಳ ಮೂಲಕ ಇಂದು ಭಾರತ ಉನ್ನತ ಮಟ್ಟಕ್ಕೇರಿದೆ ಎಂದು ಕ್ಷತ್ರೀಯ ಒಕ್ಕೂಟ ರಾಜ್ಯ ಸಂಚಾಲಕ ತಾರಾಸಿಂಗ್ ಹೇಳಿದರು.
ಸಮೀಪದ ಚನ್ನಾಪೂರದಲ್ಲಿಯ ಸೂರ್ಯ ದೇವಾಲಯದಲ್ಲಿ ಕ್ಷತ್ರೀಯ ಸಮಾಜ ಸಭೆಯನ್ನುದ್ದೇಶಿಸಿ ಮಾತನಾಡಿದವರು. ರಾಜ-ಮಹಾರಾಜರ ನಂತರ ಒಗ್ಗಟ್ಟಿಲ್ಲದೇ, ಸಂಘಟನೆಯಿಲ್ಲದೇ, ಉದ್ಯೋಗವಿಲ್ಲದೆ, ಶೈಕ್ಷಣಿಕ, ರಾಜಕೀಯವಾಗಿ ಹಿಂದಿದ್ದೇವೆ. ಹಲವಾರು ವರ್ಷಗಳ ಇತಿಹಾಸ ಹೊಂದಿದ ನಾವು ಮುಂದೆ ಹೋಗದಂತೆ ಕಟ್ಟಿ ಹಾಕಿದೆ. ರಾಜ್ಯದಲ್ಲಿ ನಮ್ಮ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ರಾಜಕೀಯ ಸ್ಥಾನ ಕೊರತೆಯಿಂದಾಗಿ ಸರ್ಕಾರದ ಸಹಾಯದಿಂದ ಹಿಂದುಳಿದಿದ್ದೇವೆ. ಅದಕ್ಕಾಗಿ ಮುಂದಿನ ದಿನಮಾನಗಳಲ್ಲಿ ಕ್ಷತ್ರೀಯ ಸಮಾಜದವರು ಒಗ್ಗಟ್ಟಾದರೆ ಮಾತ್ರ ಈ ಸಮಾಜ ಉಳಿಯಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಉದ್ಯಮಿ ಸುರೇಶ ಕಲಾಲ ಮಾತನಾಡಿ ಮಾನವನಾದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು. ಸಮಾಜದ ಬೆಳವಣೆಗೆಗೆ ಸದಾ ಕೈಜೋಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಕೆ.ಎಚ್.ಕಾಕನೂರ, ಮಾಜಿ ಜಿ.ಪಂ. ಸದಸ್ಯರುಗಳಾದ ರಾಧಾ ಶಾಮಂ ಕಾಂದ್ರೋಳ್ಳಿ, ಶಿವನಸಿಂಗ ಮೊಕಾಶಿ, ತಾ.ಪಂ.ಇ.ಓ. ಶಾಮ್ ಕಾಂದ್ರೋಳ್ಳಿ, ಪಿಡಿಓ ಜಯರಾಮ್ ಕಾಂದ್ರೋಳ್ಳಿ, ರಮೇಶ ಮೊಕಾಶಿ, ಮುಖಂಡರುಗಳಾದ ವಿಜಯಕುಮಾರ ಶಿಂಧೆ, ಸುಭಾಸ್ ಹಾಲಗತ್ತಿ, ಮಹಾದೇವ ಸಿಂಗ್ ಮಾತನಾಡಿದರು. ಶಿವನಗೌಡ ಪಾಟೀಲ, ಇಂದ್ರಜಿತ್ ಗಿರಿ, ಸ್ವರಾಜ್ ಚವ್ಹಾನ, ಪ್ರವೀಣ ಗಿರಿ, ಕುಮಾರ್ ಪರದೇಶಿ, ನಿಂಗನಗೌಡ ಪಾಟೀಲ, ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.