ಶಂಕರಮಠ ರಸ್ತೆಯಲ್ಲಿ ದುರ್ನಾತ, ಹೇಳೋರಿಲ್ಲ,ಕೇಳೋರಿಲ್ಲ
ಸುಮಾರು ವರ್ಷಗಳು ಕಳೆದರೂ ಈ ರಸ್ತೆಯ ದುರ್ನಾತ ಕೇಳುವುರು ಇಲ್ಲಾ, ಕ್ಲೀಸ್ ಮಾಡುವುದಂತು ದೂರ ಉಳಿತು. ಈ ದುರ್ವಾಸನೆಗೆ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ನೂರಾರು ಸಾರಿ ಪಾಲಿಕೆವರಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನ ಆಗಿಲ್ಲ, ಹೀಗೆ ಆದ್ರೇ ಸ್ಥಳೀಯರು ವಾಸನೆಗೆ ಆರೋಗ್ಯ ಕೇಡುವ ಸ್ಥಿತಿ ಎದುರಾಗಿದೆ ಎನ್ನಿದು ಅಂತಿರಾ ಈ ಸ್ಟೋರಿ ನೋಡಿ...ಹೌದು ಧಾರವಾಡದ ಯಾಲಕ್ಕಿಶೆಟ್ಟರ್ ಕಾಲೊನಿಯ ಶಂಕರಮಠ ರಸ್ತೆಯ ತುಂಬ ದುರ್ನಾತ ಬರುತ್ತಿದೆ. ಹಲವಾರು ತಿಂಗಳಿಂದ ಈ ವಾಸನೆ ಬರುತ್ತಿದ್ದು, ಅಲ್ಲಿನ ಸ್ಥಳೀಯರು ಪಾಲಿಕೆಯವರಿಗೆ ದೂರು ನೀಡಿದರೂ ಸಹ ಆ ಸಮಸ್ಯೆ ಬಗೆಹರಿದಿಲ್ಲ. ನಗರದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಶಂಕರ ಮಠಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕದ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ. ಹೀಗಾಗಿ ಸಹಜವಾಗಿಯೇ ತ್ಯಾಜ್ಯ ನೀರು ಹರಿದು ಹೋಗದೇ ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇದರಿಂದ ಅಲ್ಲಿನ ಸ್ಥಳೀಯರು ದುರ್ನಾತದ ಜೊತೆಗೆ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಈ ಚರಂಡಿಗಳು ಈ ರೀತಿ ಬ್ಲಾಕ್ ಆಗಿದ್ದರಿಂದ ಕಾಯಿಪಲ್ಲೆ ತೆಗೆದುಕೊಂಡು ಹೋಗಲು ಬರುವ ವ್ಯಾಪಾರಸ್ಥರು ನಮ್ಮ ಅಂಗಡಿಗೆ ಬರುತ್ತಿಲ್ಲ. ಚರಂಡಿಯನ್ನು ದುರಸ್ತಿಗೊಳಿಸಿ ನೀರು ಹರಿದು ಹೋಗುವಂತೆ ಮಾಡಬೇಕು ಎಂದು ಪಾಲಿಕೆಯ ನೂತನ ಸದಸ್ಯರಿಗೂ ಮನವಿ ಮಾಡಿದ್ದೇವೆ. ಆದ್ರು ಯಾವುದೇ ಪ್ರಯೋಜ ಆಗಿಲ್ಲ, ಚುನಾವಣೆ ಬಂದ್ರೇ ಓಟ್ ಕೇಳಲು ಬರ್ತಾರೆ ಗೆದ್ದ ನಂತರ ಜನತೆ ಸಮಸ್ಯೆ ಅಲಿಸುವುದೇ ಮರಿತು ಬೀಡ್ತಾರೆ.ಇನ್ನಮುಂದೇ ಈ ಸಮಸ್ಯೆ ಬಗಿಹರಿಸಿ ಕೋಡಬೇಕು ಎಂದು ಕಾಯಿಪಲ್ಲೆ ವ್ಯಾಪಾರಸ್ಥೆ ಯಲ್ಲವ್ವ ಉಳ್ಳಿಗೇರಿ ಪಾಲಿಕೆವರಿಗೆ ಆಗ್ರಹಿಸಿದರು. ಹಲವಾರು ತಿಂಗಳಿನಿಂದ ಈ ರೀತಿಯ ಸಮಸ್ಯೆಯನ್ನು ಅಲ್ಲಿನ ನಿವಾಸಿಗಳು ಅನುಭವಿಸುತ್ತಿದ್ದರೂ ಪಾಲಿಕೆಯವರು ಮಾತ್ರ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಇನ್ನಾದರೂ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಅದನ್ನು ಬಗೆಹರಿಸಬೇಕಾಗಿದೆ.