ಮಗುವಿನ ಹೊಟ್ಟೆಯಲ್ಲಿ ವಿಷ ಪತ್ತೆ. ಕೂಸಿನ ಸಾವಿಗೆ ಕಾರಣ ಅಪ್ಪಾನಾ ಅಮ್ಮನಾ?

ಅದು ಈಗಷ್ಟೇ 10 ತಿಂಗಳ ಮಗು. ಆ ಮಗಗೆ ಯಾರು ವಿಷ ಹಾಕಿದರೋ ಗೊತ್ತಿಲ್ಲ. ವಿಷ ಪ್ರಾಶನದಿಂದ ಆ ಮಗು ಸತ್ತೇ ಹೋಯ್ತು. ಆದರೆ ಈಗ ಆ ಮಗುವಿನ ತಂದೆ ಹಾಗೂ ತಾಯಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪ ಮಾಡುತಿದ್ದಾರೆ. ಹೀಗಾಗಿ ಮಗು ಸತ್ತು 24 ಗಂಟೆಯಾದರೂ ಮಗುವಿನ ಅಂತ್ಯಕ್ರಿಯೆ ನಡೆದಿಲ್ಲ. ಹಾಗಾದ್ರೆ ಎಲ್ಲಿ ನಡೆದಿದೆ ಇದು ಅನ್ನೊದು ಇಲ್ಲಿದೆ ನೋಡಿ... ಈ ಫೋಟೊದಲ್ಲಿರುವ ಮಗುವನ್ನ ನೋಡಿ. ಇದು ಈಗ 10 ತಿಂಗಳ ಕೂಸು. ಧಾರವಾಡ ಜಿಲ್ಲೆಯ ಗೊಂಗಡಿಕೊಪ್ಪ ಗ್ರಾಮದ ಮಹ್ಮದಅಲಿ ಹಾಗೂ ಸಮ್ರಿನ್ ಎಂಬ ದಂಪತಿಯ ಮಗು ಇದು. ನಿನ್ನೆ ಸಂಜೆ ಈ ಮಗು ಏಕಾಎಕಿ ವಾಂತಿ ಮಾಡುತ್ತ ಅಳಲು ಆರಂಭಿಸಿದೆ. ಹೀಗಾಗಿ ತಾಯಿ ಈ ತನ್ವಿರ ಎಂಬ ಮಗುವನ್ನ ಔಷಧ ಕುಡಿಸಿ ಜೋಳಿಗೆಯಲ್ಲಿ ಮಲಗಿಸಿದ್ದಾಳೆ. ಆದರೆ ಮಗು ಏಕಾಎಕಿ ಸಿರಿಯಸ್ ಆಗಿದ್ದಕ್ಕೆ ಮನೆಯಲ್ಲಿರುವ ಎಲ್ಲರೂ ಸೇರಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ತಂದಿದ್ದಾರೆ. ಅಷ್ಟೊತ್ತಿಗೆ ಮಗು ತನ್ನ ಜೀವವೇ ಬಿಟ್ಟಿದೆ. ಇನ್ನು ಕುಟುಂಬದವರು ಮತ್ತೇ ಮಗುವನ್ನ ಮನೆಗೆ ತೆಗೆದುಕೊಂಡು ಹೋದ ನಂತರ, ಮಗುವಿನ ಬಳಿ ವಿಷದ ವಾಸನೆ ಬಂದಿದೆ. ಹೀಗಾಗಿ ಎಲ್ಲರೂ ಸೇರಿ ಮತ್ತೇ ಬೆಳಿಗ್ಗೆ ಮಗುವನ್ನ ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಇಟ್ಟಿದ್ದಾರೆ. ಆದರೆ ಇಲ್ಲಿ ಸಮಸ್ಯೆ ಬಂದಿದ್ದ ಏನೆಂದ್ರೆ, ತಂದೆಯೇ ಮಗುಗೆ ವಿಷ ಹಾಕಿ ಸಾಯಿಸಿದ್ದಾನೆ ಎನ್ನವು ಆರೋಪ ಮಾಡ್ತಾಳೆ. ಮತ್ತೊಂದು ಕಡೆ ಮಗುವಿನ ತಂದೆ ಕುಡಾ ತಾಯಿಯ ಮೇಲೆ ವಿಷ ಹಾಕಿರುವ ಆರೋಪ ಮಾಡುತಿದ್ದಾಳೆ. ಹೀಗಾಗಿ ಮಗು ಸತ್ತು 24 ಗಂಟೆಯಾದರೂ ಆ ಮಗುವಿನ ಅಂತ್ಯಕ್ತಿಯೆ ನಡೆದಿಲ್ಲ. ಆದರೆ ಹೆತ್ತ ತಾಯಿ ಹೇಗೆ ವಿಷ ಹಾಕ್ತಾಳೆ ಎನ್ನುವ ಆರೋಪ ಮಗುವಿನ ತಾಯಿ ಕಡೆಯವರು ಮಾಡುತ್ತಾರೆ. ಇನ್ನು ಕಳೆದ 16 ತಿಂಗಳ ಹಿಂದೆ ಮಹ್ಮದಅಲಿ ಹಾಗೂ ಸಮ್ರಿನ್ ಮದುವೆಯಾಗಿತ್ತು. ಅದಾದ ನಂತರದಿಂದ ಇವರಿಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಆದರೆ ನಿನ್ನೆ ಮಗುವಿನ ಯಾರು ವಿಷ ಹಾಕಿದರೋ ಗೊತ್ತಿಲ್ಲ. ಮಗು ಮಾತ್ರ ಸತ್ತು ಹೋಗಿದೆ. ಇನ್ನು ಈ ದಂಪತಿಗಳಿಬ್ಬರೂ ಬೇರೆಯವರ ಹೊಲದಲ್ಲೇ ಕೆಲಸ ಮಾಡಿ ಜೀವನ ಮಾಡುವವರು. ಆದರೆ ನೆಮ್ಮದಿಯಿಂದ ಇರಬೇಕಾದ ಈ ಕುಟುಂಬ ಈ ಮಗು ಸಾವಿನಿಂದ ಪೊಲೀಸ್ ಠಾಣೆವರೆಗೆ ಹೋಗಬೇಕಾಗಿದೆ. ಸದ್ಯ ಯಾರು ಈ ಮಗುಗೆ ವಿಷ ಹಾಕಿದ್ದು ಎನ್ನುವದು ಗೊತ್ತಾಗಲಿ ಎಂದು ಎಲ್ಲರೂ ಕೇಳುವಂತೆ ಆಗಿದೆ. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳ ನಡುವೆ ಕೂಸು ಬಡವಾಯಿತು ಎಂದು ಗಾದೆ ಮಾತನ್ನ ಕೇಳಿದ್ದೆವೆ. ಆದರೆ ಇಲ್ಲಿ ಮಗುವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ವಿಷದ ಸ್ಯಾಂಪಲ್ ಎಫ್ಎಸ್ಎಲ್ ವರದಿಗಾಗಿ ಕಳಿಸಲಿದ್ದಾರೆ. ವರದಿ ಬಂದ ನಂತರವೇ ಮಗುವಿನ ಸಾವಿನ ಬಗ್ಗೆ ಎಲ್ಲ ಗೊತ್ತಾಗಲಿದೆ.