ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿ ಹುಟ್ಟಲು ಕಾರಣ ಆಗಿದ್ದೇ ಕ್ಯೂಟ್ ಗಿಫ್ಟ್

ಹರಿಪ್ರಿಯಾ & ವಸಿಷ್ಠ ಸಿಂಹ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಅಚ್ಚರಿ ಎಂದರೆ, ಹರಿಪ್ರಿಯಾ & ವಸಿಷ್ಠ ಸಿಂಹ ನಡುವೆ ಪ್ರೀತಿ ಶುರುವಾಗಲು ಕಾರಣ ಆಗಿದ್ದು ಒಂದು ನಾಯಿಮರಿ. 'ಹರಿಪ್ರಿಯಾ ಲಕ್ಕಿ & ಹ್ಯಾಪಿ ಎಂಬ ನಾಯಿಗಳನ್ನ ಸಾಕಿದ್ದರು. ಆದರೆ ಲಕ್ಕಿ ಸತ್ತ ನಂತರ ಹ್ಯಾಪಿ ಒಂಟಿಯಾಯ್ತು ಆ ಸಂದರ್ಭದಲ್ಲಿ ವಸಿಷ್ಠ ಸಿಂಹ, ಕ್ರಿಸ್ಟಲ್ ಎಂಬ ನಾಯಿಮರಿಯನ್ನ ಹರಿಪ್ರಿಯಾಗೆ ನೀಡಿದರು. ಕ್ರಿಸ್ಟಲ್ ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು ಎಂದಿದ್ದಾರೆ ಹರಿಪ್ರಿಯಾ.