ಕಾಂತಾರ' ಚಿತ್ರದ ದೃಶ್ಯ ಕಳುಹಿಸಿ ಕೊಲೆ ಬೆದರಿಕೆಯೊಡ್ಡಿದ ಅಸಾಮಿ, ದೂರು ದಾಖಲು
ಬೆಂಗಳೂರು : 'ಕಾಂತಾರ' ಸಿನಿಮಾದ ದೃಶ್ಯವೊಂದನ್ನು ಕಳುಹಿಸಿ ಇದೇ ರೀತಿ ನಿನ್ನನ್ನು ಕೊಲೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ ವಿಚಿತ್ರ ಪ್ರಕರಣವೊಂದು ಕುಣಿಗಲ್ ನಲ್ಲಿ ವರದಿಯಾಗಿದೆ.
ಕುಣಿಗಲ್ ನಲ್ಲಿ ನರಸಿಂಹಮೂರ್ತಿ ಎಂಬುವವರಿಗೆ ಶರತ್ ಕುಮಾರ್ ಎಂಬಾತ ಈ ರೀತಿಯಾದ ಬೆದರಿಕೆಯೊಡ್ಡಿದ್ದಾನೆ.
ಈ ಸಂಬಂಧ ಆರೋಪಿ ಶರತ್ ಕುಮಾರ್ ನನಗೆ ಕಾಂತಾರ ಸಿನಿಮಾದ ದೃಶ್ಯಗಳನ್ನು ಕಳುಹಿಸಿ ಇದೇ ರೀತಿ ನನ್ನನ್ನು ಕೊಲೆ ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ದಾನೆ ಎಂದು ನರಸಿಂಹಮೂರ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೊಬ್ಬರಿ 1 ಕೋಟಿ ರೂ. ಹಣ ವಶಕ್ಕೆ
ಕಲಬುರಗಿ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇ10 ರಂದು ಮತದಾನ ನಡೆಯಲಿದೆ. ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಈಗಾಗಲೇ ಮೂರು ಪಕ್ಷದ ನಾಯಕರು ಪ್ರಚಾರದಲ್ಲಿ ಕೈಗೊಂಡಿದ್ದಾರೆ.
ಇದೀಗ ರಾಜ್ಯದಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಹಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಈ ವೇಳೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅದರಂತೆ ಇದೀಗ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಬೆಳ್ಳಿ, ಮದ್ಯ ವಶಕ್ಕೆ ಪಡೆಯಲಾಗಿದೆ.
ಕಲುಬುರಗಿ ಜಿಲ್ಲೆಯಲ್ಲಿ ಫರಹತಾಬಾದ್ ಚೆಕ್ಪೋಸ್ಟ್ನಲ್ಲಿ ಯಾವುದೇ ದಾಖಲೆಯಿಲ್ಲದೆ ಕಾರಿನಲ್ಲಿ ಬರೊಬ್ಬರಿ 1 ಕೋಟಿ ರೂ. ಹಣ ಪತ್ತೆಯಾಗಿದೆ. ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ಮಾಡಿದಾಗ ಹಣವನ್ನು ಶವಕ್ಕೆ ಪಡೆದಿದ್ದಾರೆ. ರವಿ ಎಂಬಾತತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಪೊಲೀಸರು ಮತ್ತು ಅಧಿಕಾರಿಗಳು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಪೊಲೀಸ್ ಬಲೆಗೆ ಬಿದ್ದ ರವಿ, ತಾನು ಹತ್ತಿ ಮಿಲ್ ಮಾಲೀಕನಿದ್ದೇನೆ. ಕಾರ್ಮಿಕರ ವೇತನ ನೀಡಲು ಹಣ ತಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ಇನ್ನು ಕೂಡ ಯಾವುದೇ ದೂರು ದಾಖಲಾಗಿಲ್ಲ.