ಗಣರಾಜ್ಯೋತ್ಸವ ಪೆರೇಡ್ ನ ಸ್ತಬ್ದ ಚಿತ್ರದಲ್ಲಿ ಇಳಕಲ್ ಸೀರೆ
ಬಾಗಲಕೋಟೆ: ದೇಶ, ವಿದೇಶಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಕುಪ್ಪಸ ಗಣರಾಜ್ಯೋತ್ಸವದ ಮೆರಗು ಮತ್ತಷ್ಟು ಹೆಚ್ಚಿಸಲಿವೆ.
ನಾರಿಯರ ಮನ ಗೆದ್ದಿರುವ ಗುಳೇದಗುಡ್ಡ ಕುಪ್ಪಸ ಹಾಗೂ ಇಳಕಲ್ ಸೀರೆ ಈ ಬಾರಿ ಗಣರಾಜ್ಯೋತ್ಸವದ ಪರೇಡ್ ಗೆ ಆಯ್ಕೆಯಾಗಿವೆ.
ರಾಜ್ಯದ 16 ವಸ್ತುಗಳು ಪರೇಡ್ ಗೆ ಆಯ್ಕೆಯಾಗಿವೆ. ಇವುಗಳೊಂದಿಗೆ ಖಲೀಫಾ ಕಲೆ ಸೇರಿದಂತೆ ಕಿನ್ನಾಳ ಗೊಂಬೆಗಳು ಹಾಗೂ ಚನ್ನಪಟ್ಟಣದ ಗೊಂಬೆಗಳು ಕೂಡ ಸ್ತಬ್ಧ ಚಿತ್ರಗಳ ಸಾಲಿನಲ್ಲಿ ಇರಲಿವೆ.
ಈ ಸೀರೆ ಹಾಗೂ ಕುಪ್ಪಸಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಕೈ ಮಗ್ಗದಿಂದ ಇವುಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ, ಇತ್ತೀಚೆಗೆ ಸೀರೆ ಹಾಗೂ ಕುಪ್ಪಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಆದರೂ ಇಂದಿಗೂ ಈ ಸೀರೆ ಹಲವು ಮಹಿಳೆಯರ ಆಕರ್ಷಣೆಯಾಗಿದೆ.