ನಾಳೆ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿರುವ ಪಕ್ಷೇತರ ಶಾಸಕ ಎಚ್. ನಾಗೇಶ್
ಕೋಲಾರ: ಮುಳುಬಾಗಿಲು ಪಕ್ಷೇತರ ಶಾಸಕ ಎಚ್. ನಾಗೇಶ್ ಅವರು ನಾಳೆ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅವರು ನಾಳೆ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದೇನೆ ಎಂದು ಎಚ್. ನಾಗೇಶ್ ಬಹಿರಂಗಪಡಿಸಿದ್ದಾರೆ.
ನಮ್ಮ ತಾತನವರ ಕಾಲದಿಂದಲೂ ನಾನು ಕಾಂಗ್ರೆಸ್, ನನ್ನ ತಾಲೂಕಿನಲ್ಲಿ ಕೆಲಸ ಕಾರ್ಯಗಳು ಆಗಲಿ ಅನ್ನೋ ಕಾರಣಕ್ಕೆ ಬಿಜೆಪಿ ಗೆ ಬೆಂಬಲ ಸೂಚಿಸಿದ್ದೆ. ಪಕ್ಷೇತರನಾಗಿ ಗೆದ್ದು ನನಗೆ ಅನುದಾನಗಳು ಬೇಕು ಅದಕ್ಕಾಗಿ ನಾನು ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿದ್ದೆವು ಎಂದು ಸ್ಪಷ್ಟ ಪಡಿಸಿದ್ರು. ಅಲ್ಲದೆ ಶನಿವಾರ ಬೆಂಗಳೂರಿನ ಕೆಪಿಸಿಸಿ ಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ, ಮಹದೇವ ಪುರ ನಾನು ಹುಟ್ಟು ಬೆಳೆದ ಊರು, ಹಾಗಾಗಿ ಮಹದೇವಪುರದ ಜನ ನನ್ನನ್ನು ಕರೆಯುತ್ತಾ ಇದ್ದಾರೆ ಎಂದು ಹೇಳಿದ್ದಾರೆ.