ಖಾಕಿ ಕರ್ತವ್ಯದ ಹಿಂದೆ ಇದೆ ಕರುಣಾಜನಕ ಕಹಾನಿ : ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದ ಪಿಐ ರವಿಚಂದ್ರಗೆ ಅಭಿನಂದನಗಳ ಮಹಾಪೂರ

ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಉಪನಗರ ಠಾಣೆ ಇನ್ಸ್ ಪೆಕ್ಟರ್ ರವಿಚಂದ್ರ ಬಡಫಕೀರಪ್ಪನವರ್ ಯಶಸ್ವಿಯಾಗಿದ್ದಾರೆ .
ಒಂದೇ ವಾರದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ಅವಳಿ ನಗರದಲ್ಲಿ ನಡೆದಿದ್ದವು . ಆಗ ಉಪನಗರ ಠಾಣೆಯಲ್ಲೂ ಕೂಡ ಕಳ್ಳತನವಾಗಿತ್ತು . ಈ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ರವಿಚಂದ್ರ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು . ಆದ್ರೆ ತಾಯಿ ಅಗಲಿಕೆ ನಡುವೆಯೇ ಮೂರು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾದ ರವಿಚಂದ್ರ ಅವರು ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತನ ಬಗ್ಗೆ ಮಾಹಿತಿ ಕಲೆಹಾಕಿ ಹಾಕಿದ ಅವರು , ಬಳ್ಳಾರಿ ಮೂಲದ ಗಣೇಶ್ ಕಾಲೋನಿಯ 26 ವರ್ಷದ ಶ್ರೀಕಾಂತ ಎಂಬಾತನನ್ನು ಬಂಧಿಸಿದ್ದಾರೆಬಂಧಿಸಿದ್ದಾರೆ.
ಬಂಧಿತ ನಗರದ ಮಿಷನ್ ಕಂಪೌಂಡ ಹತ್ತಿರ ಮನಿಯೊಂದರಲ್ಲಿ 3,20,000 / - ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000 / - ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ .