ವಧು ಹುಡುಕಿಕೊಡಿ ಮದುವೆಗಾಗಿ 'ಎಲಿಜಬಲ್ ಬ್ಯಾಚುಲರ್ಗಳಿಂದ ಮೆರವಣಿಗೆ

ಪುರುಷ- ಮಹಿಳೆಯರ ಲಿಂಗಾನುಪಾತದಲ್ಲಿ ಭಾರಿ ಅಂತರ ಉಂಟಾಗುತ್ತಿರುವ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು, ಮಹಾರಾಷ್ಟ್ರದ ಸೊಲಾಪುರದಲ್ಲಿ ಬ್ಯಾಚುಲರ್‌ಗಳು ತಮಗೆ ವಧು ಹುಡುಕಲು ಮೆರವಣಿಗೆ ನಡೆಸಿದ ವಿಶಿಷ್ಟ ಘಟನೆ ನಡೆದಿದೆ. ಸಂಘಟನೆಯೊಂದು 'ವಧೂವರರ ಮೋರ್ಚಾ'ವನ್ನು ಬುಧವಾರ ಆಯೋಜಿಸಿತ್ತು. ಮಹಾರಾಷ್ಟ್ರದಲ್ಲಿನ ಪುರುಷ- ಮಹಿಳೆ ಲಿಂಗಾನುಪಾತವನ್ನು ಸುಧಾರಿಸಲು ಪೂರ್ವ ಪರಿಕಲ್ಪನೆ ಮತ್ತು ಪೂರ್ವ ಜನನ ನಿರ್ಣಯ ತಂತ್ರಜ್ಞಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಜಿಲ್ಲಾಧಿಕಾರಿ ಕಚೇರಿಗೆ ಈ ಸಂಘಟನೆ ಮನವಿ