'ಕಥಾಭರಣ- ವಿಭಿನ್ನ ಭಾವಗಳ ಹೂರಣ' ಸಂಪಾದಿತ ಕೃತಿ ಬಿಡುಗಡೆ

'ಕಥಾಭರಣ- ವಿಭಿನ್ನ ಭಾವಗಳ ಹೂರಣ' ಸಂಪಾದಿತ ಕೃತಿ ಬಿಡುಗಡೆ

ಬೆಂಗಳೂರು: ಕನ್ನಡದ 28 ಲೇಖಕರು ಬರೆದಿರುವ ವಿಭಿನ್ನ ಕಥೆಗಳ ಸಂಕಲನ 'ಕಥಾಭರಣ - ವಿಭಿನ್ನ ಭಾವಗಳ ಹೂರಣ' ಹಾಗೂ ವಸಂತ ಕಲ್ ಬಾಗಲ್ ಬರೆದಿರುವ 'Some ದರ್ಶನ' ಮತ್ತು 'ಅಡ್ಡಿತುಷ ಬಕ್ಕಜಬನ್ನಿ' ಕೃತಿಗಳು ಅಕ್ಕಮಹಾದೇವಿ ಸಭಾಂಗಣದಲ್ಲಿ ಬಿಡುಗಡೆಯಾಯಿತು.

'ಕಥಾಭರಣ - ವಿಭಿನ್ನ ಭಾವಗಳ ಹೂರಣ' ಕೃತಿಯನ್ನು ಡಾ.ಅಜಿತ್ ಹರೀಶಿ ಮತ್ತು ವಿಠಲ್ ಶೆಣೈ ಸಂಪಾದಿಸಿದ್ದಾರೆ.

ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮೂರು ಕೃತಿಗಳನ್ನು ಪ್ರಕಟಿಸಿದೆ.

ಲೇಖಕಿ ಪೂರ್ಣಿಮಾ ಮಾಳಗಿಮನಿ 28 ವಿವಿಧ ಕಥೆಗಳನ್ನು ಭೋಜನದ ರುಚಿಕರ ಭಕ್ಷ್ಯಗಳಿಗೆ ಹೋಲಿಸಿ, ಕಥಾಸಂಕಲನದಲ್ಲಿರುವ ವೈವಿಧ್ಯತೆಯ ಮೂಲಕ 'ಕಥಾಭರಣ' ಕೃತಿಯ ಪರಿಚಯ ಮಾಡಿದರು. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ  ದರ್ಶನ' ಮತ್ತು 'ಅಡ್ಡಿತುಷ ಬಕ್ಕಜಬನ್ನಿ' ಕೃತಿಗಳ ಪರಿಚಯ ಮಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಪರಿಶ್ರಮ, ಛಲ ಮತ್ತು ಸಾಹಸಗೈಯುವ ವಿಷಯಗಳ ಕುರಿತು ಕ್ಯಾಪ್ಟನ್ ಗೋಪಿನಾಥ್ ಮಾತನಾಡಿದರು. ಸಾಹಿತಿ ಅಲಕಾ ತೀರ್ಥಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿಠಲ್ ಶೆಣೈ, ಸಾಹಿತ್ಯಲೋಕ ಪಬ್ಲಿಕೇಷನ್ಸ್​ನ ರಘುವೀರ್ ಸಮರ್ಥ್ ಉಪಸ್ಥಿತರಿದ್ದರು. ಯುವಸಾಹಿತಿ ಅನಂತ್ ಕುಣಿಗಲ್ ವಂದಿಸಿದರು. ಕತೆಗಾರ್ತಿ ಶ್ರೀಮತಿ ಆಶಾ ಜಗದೀಶ್ ನಿರೂಪಿಸಿದರು.