'ಶಾ. ಬಾಲುರಾವ್ ಯುವಬರಹಗಾರ' ಪ್ರಶಸ್ತಿ ಪ್ರಕಟ; ಇಸ್ಮಾಯಿಲ್ ತಳಕಲ್ ಆಯ್ಕೆ

'ಶಾ. ಬಾಲುರಾವ್ ಯುವಬರಹಗಾರ' ಪ್ರಶಸ್ತಿ ಪ್ರಕಟ; ಇಸ್ಮಾಯಿಲ್ ತಳಕಲ್ ಆಯ್ಕೆ

ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನದ ವತಿಯಿಂದ ಯುವ ಲೇಖಕರ ಅತ್ಯುತ್ತಮ ಕೃತಿಗೆ ನೀಡುವ 'ಶಾ. ಬಾಲುರಾವ್ ಯುವಬರಹಗಾರ' ಪ್ರಶಸ್ತಿಗೆ ಇಸ್ಮಾಯಿಲ್ ತಳಕಲ್ ಅವರ 'ಬೆತ್ತಲೆ ಸಂತ' ಕೃತಿ ಆಯ್ಕೆಯಾಗಿದೆ. ಅ.30ರಂದು ಬಿ.ಎಂಶ್ರೀ. ಪ್ರತಿಷ್ಠಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಪ್ರಶಸ್ತಿಯಲ್ಲಿ 25 ಸಾವಿರ ರೂ. ಹಾಗೂ ಸ್ಮರಣಿಕೆ ಒಳಗೊಂಡಿದೆ.

ಇಸ್ಮಾಯಿಲ್ ತಳಕಲ್ ಪ್ರಥಮ ಕಥಾ ಸಂಕಲನದಲ್ಲಿ ಕೌಶಲ್ಯದಿಂದ ವೈವಿಧ್ಯಮಯವಾದ ವಸ್ತುಗಳನ್ನು ಸ್ವಾರಸ್ಯಪೂರ್ಣವಾಗಿ ಹೆಣೆದಿದ್ದಾರೆ. ಸಮಾಜದ ಅಹಿತಕರ ಘಟನೆಗಳು ಬಹುವಾಗಿ ಕಾಡಿ, ಏನೂ ಮಾಡಲಾಗದ ಅಸಹಾಯಕತೆಯಿಂದ ಎದೆ ಭಾರವಾಗಿಸಿದಾಗ, ಅದನ್ನು ಹಗುರ ಮಾಡಿಕೊಳ್ಳುವ ಸಾಧನವಾಗಿ ಕಥೆ ಪ್ರಯೋಗ ಮಾಡಿದ್ದಾರೆ. ಶೋಷಣೆಯ ಮಗ್ಗುಲಗಳನ್ನು ನೈಜವಾಗಿ ಚಿತ್ರಿಸುವಲ್ಲಿ ಇಸ್ಮಾಯಿಲ್ ತಳಕಲ್ ಯಶಸ್ವಿಯಾಗಿದ್ದಾರೆ ಎಂದು ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯ ಡಾ. ಕೂಡ್ಲೂರು ಮೆಂಕಟಪ್ಪ ಮತ್ತು ಡಾ. ಪ್ರಮೀಳಾ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.