ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬಿತ್ತು ಬೀಗ

ಬೆಂಗಳೂರು: ತೆರಿಗೆ ಕಟ್ಟದ ಆರೋಪ ಎದುರಿಸುತ್ತಿರುವ ನಗರದ ಪ್ರತಿಷ್ಠಿತ ಮಂತ್ರಿಮಾಲ್ಗೆ ಮತ್ತೆ ಬಿಬಿಎಂಪಿ ಬೀಗ ಜಡಿದಿದೆ. 27 ಕೋಟಿ ರೂಪಾಯಿ ತೆರಿಗೆಯನ್ನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳಿಂದ ಮಂತ್ರಿಮಾಲ್ಗೆ ಬೀಗ ಹಾಕಿದ್ದಾರೆ.ಮೂರು ವರ್ಷಗಳ ಅವಧಿಯಲ್ಲಿ ಮಂತ್ರಿಮಾಲ್ 36 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನ ಕಟ್ಟಬೇಕಿತ್ತು.
ಈ ಸಂದರ್ಭದಲ್ಲಿ 5 ಕೋಟಿ ಹಣವನ್ನ ಮಂತ್ರಿಮಾಲ್ ನೀಡಿತ್ತು. ಅಕ್ಟೋಬರ್ 31ರ ಬಳಿಕ ಹಲವು ಬಾರಿ ನೋಟಿಸ್ ನೀಡಿದ್ದರೂ ಉಳಿದ ಹಣವನ್ನ ಮಂತ್ರಿಮಾಲ್ ನೀಡಿರಲಿಲ್ಲ ಎನ್ನಲಾಗಿದೆ. ಅಕ್ಟೋಬರ್ ಮುಗಿದರೂ ತೆರಿಗೆ ಕಟ್ಟದಿದ್ದರಿಂದ ನವೆಂಬರ್ 15ರಂದು ಮತ್ತೆ ಬೀಗ ಹಾಕಲು ಮುಂದಾಗಿತ್ತು. ನವೆಂಬರ್ 15ರಂದು ಮಂತ್ರಿಮಾಲ್ಗೆ 15 ದಿನಗಳ ಕಾಲಾವಕಾಶವನ್ನ ಪಾಲಿಕೆ ಕೊಟ್ಟಿತ್ತು.