ಎರಡೂ ಚಿರತೆ ಒಂದೆ; ದೃಢಪಡಿಸಿದ ಡಿಎನ್‍ಎ ವರದಿ
ಹುಬ್ಬಳ್ಳಿ
ನೃಪತುಂಗಬೆಟ್ಟ, ರಾಜನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮತ್ತು ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಸೆರೆ ಹಿಡಿಯಲಾಗಿದ್ದ ಎರಡು ಚಿರತೆ ಒಂದೇ ಎಂದು ಡಿಎನ್‍ಎ ವರದಿಯಿಂದ ತಿಳಿದು ಬಂದಿದೆ ಚಿರತೆಯು ಹುಬ್ಬಳ್ಳಿ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹಳೆಕಟ್ಟಡದಲ್ಲಿ ವಾಸವಾಗಿತ್ತು. ನಂತರ ಅದು ಅಮರಗೋಳ, ಗೋವನಕೋಪ್ಪ ಮಾರ್ಗವಾಗಿ ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳಿಗೆ ಹೋಗಿರುವ ಕುರಿತು ಅನುಮಾನವಿತ್ತು. ಅದರಂತೆ ಎರಡು ಚಿರತೆ ಒಂದೇ ಅಥವಾ ಬೇರೆ ಬೇರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಎರಡುಕಡೆಯಲ್ಲಿ ಸಂಗ್ರಹಿಸಲಾಗಿದ್ದ ಚಿರತೆಲದ್ದಿಯನ್ನು ಡಿಎನ್‍ಎ ಪರೀಕ್ಷೆಗಾಗಿ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ತಿಳಿಸಿದ್ದಾರೆ.