ಚಿರತೆ ಕವಲಗೇರಿಯಿಂದ exit ಗೋವನಕೊಪ್ಪದಲ್ಲಿ ಚಿರತೆ entry

ಕಳೆದ ಮೂರನಾಲ್ಕ ದಿನಗಳಿಂದ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಚಿರತೆ ಸೆರೆಗೆ ಕಾರ್ಯಚರಣೆ ನಡೆಸಿದ್ರು, ಕೂಡಾ ನಿನ್ನೆ ರಾತ್ರಿ ಗೋವನಕೋಪದಲ್ಲಿ ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಹೌದು ಕವಲಗೇರಿಯಲ್ಲಿ ಚಿರತೆ ಹಿಡಿಯಲು ಮೂರು ದಿನಗಳಿಂದ ಕಾರ್ಯಚರಣೆ ನಡೆಸಿದ ಅರಣ್ಯ ಅಧಿಕಾರಗಳು ಇವರ ಪ್ಲ್ಯಾನ್ ನಿಂದ ತಪ್ಪಿಸಿ ಮತ್ತೆ ಗೋವನಕೋಪ್ಪದಲ್ಲಿ ಪತ್ತೆ ಆಗಿದೆ. ಕಬ್ಬಿನ ಗದ್ದೆ, ಮಾವಿನ ತೊಟದಲ್ಲಿ ಚಿರತೆ ಹೋಗ್ತಿರುವುದು ಗ್ರಾಮಸ್ಥರು ನೋಡಿ ಭಯ ಬೀತರಾಗಿದ್ದಾರೆ. ಅನಂತರ ಚಿರತೆ ಮಾಹಿತಿ ಅರಣ್ಯ ಅಧಿಕಾರಗಳ ಗಮನ ತಂದಿದ್ದಾರೆ. ಈ ಚಿರತೆಯಿಂದ ಕವಲಗೇರಿ, ಗೋವನಕೊಪ್ಪ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಭಯಬೀತರಾಗಿದ್ದಾರೆ. ಇವತ್ತಾದರೂ ಅರಣ್ಯ ಅಧಿಕಾರಗಳು ಚಿರತೆ ಹಿಡಿದು ಜನತೆ ಭಯ ಹೋಗಲಾಡಿಸುತ್ತಾರೆ ಎಂಬುವುದು ಕಾದೂನೋಡಬೇಕಿದೆ.‌‌