ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

ಜಪಾನ್‍ನಲ್ಲಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

2020ರಿಂದ ಸಾರ್ವಜನಿಕವಾಗಿ ಕಾಣೆಯಾಗಿದ್ದ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಇದೀಗ ಜಪಾನ್‍ನಲ್ಲಿ ಕಾಣಿಸಿಕೊಂಡಿದ್ದು, ಟೋಕಿಯೋದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಾಕ್ ಮಾ ಚೀನಾದಲ್ಲಿ ಏಕಸ್ವಾಮ್ಯ ವಿರೋಧಿ ನಿಯಮಗಳನ್ನು ಉಲ್ಲಂಘಿಸಿ ಚೀನಾ ಸರ್ಕಾರದಿಂದ ತೊಂದರೆಗೀಡಾಗಿದ್ದರು. ಅದಾದ ಬಳಿಕ ಅಮಾನತಿನಲ್ಲಿಟ್ಟಿದ್ದರು. ಇದೀಗ ಮೂಲಗಳ ಪ್ರಕಾರ ಜಾಕ್ ಮಾ ಅವರು ಕಳೆದ 6 ತಿಂಗಳಿಂದ ಟೋಕಿಯೋದ ಹೊರಗಿನ ಗ್ರಾಮಾಂತರದಲ್ಲಿ ಸ್ಕೀ ರೆಸಾರ್ಟ್‍ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿವೆ.