ಭೂ ಅಕ್ರಮ; ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ; ವಿ ಎಸ್ ಉಗ್ರಪ್ಪ

ಬೆಂಗಳೂರು: ಭೂ ಅಕ್ರಮ ಸಂಬಂಧ ಸಚಿವ ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ. 6 ಸಾವಿರ ಪುಟಗಳ ಆರೋಪಪಟ್ಟಿ ದಾಖಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀರಾಮುಲು ಅವರು ಜಾಮೀನು ತೆಗೆದುಕೊಂಡು ಓಡಾಡುತ್ತಿದ್ದಾರೆ. ಕಳೆದ ತಿಂಗಳು 17ರಂದು ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವರ್ಗಾವಣೆಯಾಗಿ ವಿಚಾರಣೆ ನಡೆದಿದೆ. ಬಳ್ಳಾರಿ ಹೃದಯ ಭಾಗದ ಕಾಲುವೆಯಲ್ಲಿ ರುಕ್ಮಿಣಿ ಲೇಔಟ್ ಅನ್ನು ಜನಾರ್ದನ ರೆಡ್ಡಿ ಅವರು ಮತ್ತೊಂದೆಡೆ ರಾಮುಲು 27.25 ಎಕರೆ ಜಮೀನಿಗೆ ಕಾಂಪೌಂಡ್ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
2002ರಲ್ಲಿ ಆಕುಲ ಲಕ್ಷ್ಮಮ್ಮ ಅವರ 17.25 ಎಕರೆಯನ್ನು 24-10-2002 ರಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಅವರಿಗೆ ಎಕರೆಗೆ 2 ಲಕ್ಷದಂತೆ ಮಾರಾಟ ಮಾಡುತ್ತಾರೆ. ಅದೇ ದಿನ ಆಕುಲ ಲಕ್ಷ್ಮಮ್ಮ ಹಾಗೂ ಕುಟುಂಬದವರು ಶ್ರೀರಾಮುಲು ಅವರಿಗೆ 27.5 ಎಕರೆ ಮತ್ತೊಂದು ಜಮೀನನ್ನು ಮಾರಾಟ ಮಾಡುತ್ತಾರೆ. ಒಂದು ಎಕರೆಗೆ 10 ಸಾವಿರದಂತೆ ಮಾರಾಟ ಮಾಡಿಕೊಳ್ಳುತ್ತಾರೆ. ಅಂದು ಪರಮೇಶ್ವರ್ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಭೂಮಿ ವರ್ಗಾವಣೆ ಆಗುತ್ತದೆ. ಈ ಜಾಗದಲ್ಲಿ ನದಿ ಕಾಲುವೆ ಕಾಮಗಾರಿಗಾಗಿ 10 ಎಕರೆ ಜಾಗವನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ ಎಂದು ವಿವರಿಸಿದರು.
ರು ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ ತಿಳಿಸಿದರು.