ಬಿಜೆಪಿ ಭದ್ರಕೋಟೆ ಕುಂದಾಪುರದಲ್ಲಿ ಅರಳಲಿದೆ ಕಮಲ- ಸಮೀಕ್ಷೆ

ರಾಜ್ಯ ಸಾರ್ವತ್ರಿಕ ಚುನಾವಣೆಗೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇನ್ನೇನು ದೂರವಿಲ್ಲದ ಚುನಾವಣೆಗೆ ಪ್ರಬಲ ಪಕ್ಷಗಳು ಜಯ ಸಾಧಿಸಲು ಪಣತೊಟ್ಟಿವೆ. ಅಭ್ಯರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯಲು ಬಿಡುವುದಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ.
1998ರಿಂದ ನಿರಂತರವಾಗಿ ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಕಾಣುತ್ತಲೆ ಬಂದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ ಬಿಜೆಪಿಯ ಟ್ರಂಪ್ ಕಾರ್ಡ್. ಕಾಂಗ್ರೆಸ್‌ನಲ್ಲಿ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದು ಹಾಲಾಡಿ ಎದುರು ಯಾರು ಎಂಬ ಕುತೂಹಲ ಹೆಚ್ಚಳಗೊಂಡಿದೆ. ಜೆಡಿಎಸ್, ಸಿಪಿಎಂ ಅಭ್ಯರ್ಥಿ ಆಯ್ಕೆ ವಿಚಾರದ ಗುಟ್ಟು ಇನ್ನೂ ಬಿಟ್ಟುಕೊಟ್ಟಿಲ್ಲ. ಅದಾಗಲೇ ಕುಂದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಗೆಲುವು ಖಚಿತ ಎಂದು ಸಮೀಕ್ಷೆ ಹೇಳಿದೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ಮಿಸಿರುವ ಕುಂದಾಪುರದ ಭದ್ರಕೋಟೆಯಲ್ಲಿ ಈ ಬಾರಿ ಕಮಲ ಅರಳಿದೆ ಎಂದು ಲೋಕಪಾಲ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಲೋಕಪಾಲ್ ಸಮೀಕ್ಷೆಯ ಪ್ರಕಾರ, ಈ ಬಾರಿ ಕುಂದಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55%, ಕಾಂಗ್ರೆಸ್ 38%, ಜೆಡಿಎಸ್ 05% ಹಾಗೂ ಇತರೆ ಅಭ್ಯರ್ಥಿಗಳ ಪರ ಜನರಿಂದ 02%ರಷ್ಟು ಒಲವು ವ್ಯಕ್ತವಾಗಿದೆ.
ಪಕ್ಷ ಸಂಘಟನೆಯಲ್ಲಿ ದಿ ಎ ಜಿಕೊಡ್ಗಿ ಅವರೊಂದಿಗೆ ತೊಡಗಿಸಿಕೊಂಡಿದ್ದ ಹಾಲಾಡಿ 1998ರ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಬಲಿಷ್ಠ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು 1020 ಮತಗಳಿಂದ ಸೋಲಿಸಿ ಕುಂದಾಪುರದಲ್ಲಿ ಬಿಜೆಪಿ ಖಾತೆ ತೆರೆದವರು. 2004, 2009, 2013, 2018ರಲ್ಲಿ ಸತತ ಗೆಲುವು ಕಂಡವರು. 4 ಬಾರಿ ಬಿಜೆಪಿ ಪಕ್ಷದಿಂದ, ಒಮ್ಮೆ ಪಕ್ಷೇತರರಾಗಿಯೂ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲೇ ನಿರಂತರ ಜಯ ಕಾಯ್ದುಕೊಂಡು ಬಂದಿರುವ ನಾಯಕ.
ಈವರೆಗಿನ ಬೆಳವಣಿಗೆಯಲ್ಲಿ ಕುಂದಾಪುರದ ಬಿಜೆಪಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಏಕಮೇವ ಅಭ್ಯರ್ಥಿಯಾಗಿ ಮೂಡಿಬಂದಿದ್ದಾರೆ. ಏತನ್ಮಧ್ಯೆ ಇನ್ನೊಬ್ಬ ಹಿರಿಯ ಮುಖಂಡ ಕರ್ನಾಟಕ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕೊಡ್ಗಿ ಅವರ ಹೆಸರು ಉಮೇದುವಾರಿಕೆಗಾಗಿ ಚಾಲ್ತಿಯಲ್ಲಿದೆ.
ಕುಂದಾಪುರ ವಿಧಾನಸಭಾ ಚುನಾವಣೆ
ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲಿ ಬಿಜೆಪಿಯ ಭದ್ರಕೋಟೆ ಕುಂದಾಪುರ ವಿಧಾನಸಭಾ ಕ್ಷೇತ್ರವೂ ಒಂದು. ಕುಂದಗನ್ನಡದ ಭಾಷೆಯಿಂದಲೇ ಖ್ಯಾತಿ ಗಳಿಸಿದ ಕುಂದಾಪುರ ಯಕ್ಷರಂಗಕ್ಕೆ ಹಲವು ಪ್ರತಿಭಾನ್ವಿತ ಕಲಾವಿದರು ಹಾಗೂ ಭಾಗವತರನ್ನು ಕೊಟ್ಟ ನೆಲ. ಸಿನಿ ಕ್ಷೇತ್ರಕ್ಕೂ ಇಲ್ಲಿನ ಕೊಡುಗೆ ಅಪಾರ. ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸ್ಯಾಂಡಲ್ವುಡ್ ನಟ ಉಪೇಂದ್ರ, ನಿರ್ದೇಶಕ ಯೋಗರಾಜ್ ಭಟ್ ಹೀಗೆ ಅನೇಕ ಪ್ರತಿಭಾನ್ವಿತರ ತವರು ಈ ಕುಂದಾಪುರವಾಗಿದೆ.
ಸುಂದರ ಕಡಲನ್ನು ಹೊಂದಿರುವ ಕುಂದಾಪುರದ ಸೌಂದರ್ಯವನ್ನು ತ್ರಾಸಿ ಕಡಲ ತೀರ, ಮರವಂತೆ ಬೀಚ್, ಗಂಗೊಳ್ಳಿಯ ಹಿನ್ನೀರು ಮತ್ತಷ್ಟು ಹೆಚ್ಚಿಸಿವೆ. ಕುಂದಾಪುರ ಹಾಗೂಬಸ್ರೂರು ಅನಾದಿ ರಾಜರ ಕಾಲದಿಂದಲೂ ವ್ಯಾಪಾರಿ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇದನ್ನು ಹೊರತುಪಡಿಸಿ ಇದು ಕೊಂಚ ಮಟ್ಟಿಗೆ ನಕ್ಸಲ್ ಪೀಡಿತ ಪ್ರದೇಶವೂ ಹೌದು. ಇನ್ನು ಇಲ್ಲಿನ ಜನರು ಮೀನುಗಾರಿಕೆಯನ್ನು ಬಹಳಷ್ಟು ಅವಲಂಬಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳನ್ನು ಏಕಾಂಗಿಯಾಗಿ ಮಣಿಸಿದ್ದ ಹಾಲಾಡಿ
ಮುಂದೆ 2013ರ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಕಣಕ್ಕಿಳಿದು 89 ಸಾವಿರ ಮತಗಳನ್ನು ಪಡೆದು 40 ಸಾವಿರ ಮತಗಳ ಅಂತರದಿಂದ ಹಾಲಾಡಿ ಭಾರೀ ಜಯ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದು ಹಾಲಾಡಿ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿ ಹಿಡಿದಂತಿತ್ತು. ಇದಾದ ಬಳಿಕ 2018ರ ಚುನಾವಣೆ ವೇಳೆಗೆ ಮರಳಿ ಬಿಜೆಪಿಗೆ ಬಂದಿದ್ದ ಹಾಲಾಡಿ ಮತ್ತೆ ಇಲ್ಲಿಂದ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೇ ಅಷ್ಟೊಂದು ಮತಗಳ ಅಂತರದಿಂದ ಗೆದ್ದಿದ್ದ ಈ ಜನನಾಯಕ ನಿರೀಕ್ಷೆಯಂತೆಯೇ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಹಾಲಾಡಿ ಶ್ರೀನಿವಾಸ ಶೆಟ್ಟಿ: ಹಾಲಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ನಾಯಕರಾಗಿದ್ದರೂ, ಈ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ನಾಯಕ. ಯಾವ ಮಟ್ಟಕ್ಕೆ ಇವರು ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆಂದರೆ ನಾಳೆ ಪ್ರಭಾವೀ ರಾಜಕಾರಣಿಯೊಬ್ಬರು ಇಲ್ಲಿ ಅವರ ವಿರುದ್ಧ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತುಳ್ಳ ಜನಪ್ರತಿನಿಧಿ. ಇವರು ಪಕ್ಷದ ಸಹಾಯವಿಲ್ಲದೆಯೂ ಗೆಲ್ಲಬಲ್ಲರೆಂಬುವುದಕ್ಕೆ 2013ರ ಚುನಾವಣೆಯೇ ಸಾಕ್ಷಿ. ಅಂದು ಪಕ್ಷೇತರರಾಗಿ ಇವರು ಬಿಜೆಪಿ ಹಾಗೂ ಕಾಂಗ್ರೆಸ್ನ್ನು ಏಕಾಂಗಿಯಾಗಿ ಸೋಲಿಸಿದ್ದರು. ಹೀಗಾಗಿ ಬಿಜೆಪಿ ಟಿಕೆಟ್ ಇವರಿಗೇ ಸಿಗೋದು ಬಹುತೇಕ ಖಚಿತ.
ಕಿರಣ್ ಕೊಡ್ಗಿ: ಎ.ಜಿ.ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಲಾಡಿ ಸ್ಪರ್ಧಿಸದಿದ್ದಲ್ಲಿ ಇವರನ್ನೇ ತನ್ನ ಉತ್ತರಾಧಿಕಾರಿಯಾಗಿ ಘೋಷಿಸಬಹುದು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾರು?
* ಕಿಶನ್ ಹೆಗ್ಡೆ ಕೊಳ್ಕೆಬೈಲ್: ಕಾಂಗ್ರೆಸ್ನಿಂದ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ಕಿಶನ್ ಹೆಗ್ಡೆ ಸಹಕಾರಿ ಧುರೀಣ.
* ಮಲ್ಯಾಡಿ ಶಿವರಾಮ್ ಶೆಟ್ಟಿ: ಕಾಂಗ್ರೆಸ್ ನಾಯಕರಾಗಿರುವ ಮಲ್ಯಾಡಿ ಶಿವರಾಮ್ ಶೆಟ್ಟಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
* ಪ್ರತಾಪ್ ಚಂದ್ರ ಶೆಟ್ಟಿ: ಮಾಜಿ ಸಭಾಪತಿ ಆಗಿರುವ ಪ್ರತಾಪ್ ಚಂದ್ರ ಶೆಟ್ಟಿ ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು.
*ಶ್ಯಾಮಲಾ ಭಂಡಾರಿ: ಮಹಿಳಾ ಕಾಂಗ್ರೆಸ್ ನಾಯಕಿ