ಆಟೋ ರಿಕ್ಷಾದಲ್ಲಿ ಅಶ್ಲೀಲ ಕೃತ್ಯಗಳಿಗೆ ಆಕ್ಷೇಪಿದ್ದಕ್ಕೆ ಚಾಲಕನನ್ನೇ ಹತ್ಯೆ ಮಾಡಿದ ಪ್ರೇಮಿಗಳು!

ಆಟೋ ರಿಕ್ಷಾದಲ್ಲಿ ಅಶ್ಲೀಲ ಕೃತ್ಯಗಳಿಗೆ ಆಕ್ಷೇಪಿದ್ದಕ್ಕೆ ಚಾಲಕನನ್ನೇ ಹತ್ಯೆ ಮಾಡಿದ ಪ್ರೇಮಿಗಳು!

ಪುಣೆ: ಪ್ರಯಾಣದ ವೇಳೆ ಆಟೋ ರಿಕ್ಷಾದಲ್ಲಿ ಅಶ್ಲೀಲ ಕೃತ್ಯ ಮಾಡದಂತೆ ತಾಕೀತು ಮಾಡಿದ್ದಕ್ಕೆ ಸಿಟ್ಟಾದ ಪ್ರೇಮಿಗಳು, ಚಾಲಕನನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ಪುಣೆಯ ಗಣೇಶ್ ಗಾರ್ಡನ್​ ಪ್ರದೇಶದಲ್ಲಿ ನಿನ್ನೆ ಸಂಜೆ 4.30ರ ಸುಮಾರಿಗೆ ನಡೆದಿದೆ.

ಮೃತರು ಪಿಂಪಲ್ ಗುರವ ನಿವಾಸಿ ಇಸ್ಮಾಯಿಲ್ ಶೇಖ್ (42) ಎಂದು ಗುರುತಿಸಲಾಗಿದೆ.

ತನ್ನ ಸಹೋದರ ಹತ್ಯೆಯ ಬಗ್ಗೆ ಆಸಿಫ್ ಇಸ್ಮಾಯಿಲ್ ಶೇಕ್ ಪೊಲೀಸ್ ದೂರು ನೀಡಿದ್ದಾರೆ. ಅದರಂತೆ ಐಪಿಸಿ ಸೆಕ್ಷನ್ 302, 323, 324, 504 ಮತ್ತು 506ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಮಿತ್ ಬಾಳಾಸಾಹೇಬ್ ಕಾಂಬಳೆ (26) ಎಂಬಾತನನ್ನು ಬಂಧಿಸಿದ್ದಾರೆ. ಸದ್ಯ ವಿವಿಧ ಸೆಕ್ಷನ್​ಗಳಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಅಮಿತ್ ತನ್ನ ಪ್ರೇಯಸಿಯೊಂದಿಗೆ ಆಟೋದಲ್ಲಿ ಹೋಗುತ್ತಿರುವಾಗ ಅಶ್ಲೀಲ ಕೃತ್ಯ ಮಾಡುತ್ತಿರುವುದನ್ನು ಗಮನಿಸಿ, ಚಾಲಕ ಇಸ್ಮಾಯಿಲ್ ಶೇಖ್ ಗದರಿದ್ದಾರೆ. ಇದರಿಂದ ಸಿಟ್ಟಾದ ಪ್ರೇಮಿಗಳು ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಲಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. (ಏಜೆನ್ಸೀಸ್)