ತಿರುಪತಿ ದೇವಳ: ಲಾಡ್ಡುಗಳಿಗೆ ಪರಿಸರ ಸ್ನೇಹಿ ಬ್ಯಾಗ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಬ್ಯಾಗ್‌ಗಳನ್ನು ತಯಾರಿಸಿದೆ. ಈ ಬ್ಯಾಗ್‌ಗಳು ಸುರಕ್ಷಿತವಾಗಿದ್ದು, ಮೆಕ್ಕೆಜೋಳದ ಸ್ಟಾರ್ಚ್‌ನಿಂದ ತಯಾರಿಸಲಾಗಿದೆ. ಹೀಗಾಗಿ, ಈ ಬ್ಯಾಗ್‌ಗಳನ್ನು ಜಾನುವಾರು ಸಹ ಸೇವಿಸಬಹುದಾಗಿದೆ.
ಡಿಆರ್‌ಡಿಒ ತಯಾರಿಸಿದ ಈ ಬ್ಯಾಗ್‌ಗಳ ಮಾರಾಟ ಕೌಂಟರ್ ಅನ್ನು ತಿರುಮಲ ದೇವಸ್ಥಾನ ಸಮೀಪದ ಲಾಡು ಕಾಂಪ್ಲೆಕ್ಸ್‌ನಲ್ಲಿ ಭಾನುವಾರದಿಂದ ಆರಂಭಿಸಲಾಗಿದೆ.