ಕಡಲ ಪ್ರವೇಶ ದೇಶದ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದು : ರಾಜನಾಥ್ ಸಿಂಗ್

ಕಡಲ ಪ್ರವೇಶ ದೇಶದ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದು : ರಾಜನಾಥ್ ಸಿಂಗ್

ನವದೆಹಲಿ,ಅ.9- ಭಾರತದ ಸಮೃದ್ಧಿಯು ಹೆಚ್ಚಾಗಿ ತನ್ನ ಸಮುದ್ರಗಳಿಗೆ ಸಂಬಂಸಿದೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ತನ್ನ ನಡಿಗೆಯನ್ನು ಮುಂದುವರೆಸುತ್ತಿದೆ. ಕಡಲ ಪ್ರವೇಶವು ದೇಶದ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನಾವು ಬಹಳ ಸಮಯದಿಂದ ಸಮುದ್ರಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ. ನಮ್ಮ ವ್ಯಾಪಾರ, ಆರ್ಥಿಕತೆ, ಹಬ್ಬಗಳು ಮತ್ತು ಸಂಸ್ಕøತಿಯು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ನಾವು ಸಮುದ್ರಗಳಿಗೆ ಸಂಬಂಸಿದ ಗಮನಾರ್ಹ ಸಂಖ್ಯೆಯ ಸವಾಲುಗಳನ್ನು ಎದುರಿಸಿದ್ದೇವೆ, ಎಂದು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ನ ಹೂಡಿಕೆ ಸಮಾರಂಭದ ಭಾಷಣದಲ್ಲಿ ಅವರು ಹೇಳಿದ್ದಾರೆ.

ನಮ್ಮ ಕಡಲ ವಲಯಗಳನ್ನು ಸುರಕ್ಷಿತವಾಗಿ, ಮತ್ತು ಮಾಲಿನ್ಯ ರಹಿತವಾಗಿರಿಸುವುದರ ಮೂಲಕ ನಮ್ಮ ಭದ್ರತಾ ಅವಶ್ಯಕತೆಗಳು, ಪರಿಸರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಖಾತ್ರಿಪಡಿಸಲಾಗಿದೆ. ಈ ಎಲ್ಲಾ ಸವಾಲುಗಳನ್ನು ಐಸಿಜಿ ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ ಭಾರತವು ಶೀಘ್ರವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಮತ್ತು ಅಡೆತಡೆಯಿಲ್ಲದ ಕಡಲ ಪ್ರವೇಶವು ಅದರ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಐಸಿಜಿ ಈ ಧೈರ್ಯಶಾಲಿ ಕಾರ್ಯಾಚರಣೆ ನಡೆಸಿದ ನಂತರ ದೇಶವು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಅದಲ್ಲದೆ, ಜವಾಬ್ದಾರಿಯುತ ಮತ್ತು ಸಮರ್ಥವಾದ ಕಡಲ ಶಕ್ತಿಯಾಗಿ ದೇಶದ ಸ್ಥಾನವನ್ನು ಬಲಪಡಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ, ಐಸಿಜಿ ತನ್ನ ಹಡಗುಗಳು ಮತ್ತು ವಿಮಾನಗಳನ್ನು ಅಗ್ನಿಶಾಮಕ ಕಾರ್ಯಾಚರಣೆ ಮತ್ತು ನ್ಯೂ ಡೈಮಂಡ್‍ನ್ನಲ್ಲಿ ಶೋಧ ಮತ್ತು ಕಾರ್ಯಾಚರಣೆಗಾಗಿ ಕಳುಹಿಸಿತ್ತು.

ಈ ವರ್ಷದ ಮೇನಲ್ಲಿ, ಶ್ರೀಲಂಕಾ ರಾಜಧಾನಿ ಕೊಲಂಬೊ ತೀರದ ಬಳಿ ವ್ಯಾಪಾರಿ ಹಡಗು ಎಕ್ಸ್‍ಪ್ರೆಸ್ ಪರ್ಲ್‍ನಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡ ನಂತರ ಐಸಿಜಿ ತನ್ನ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಿತು. ಇದು ಆಗ್ನೇಯ ಶ್ರೀಲಂಕಾದ ಕರಾವಳಿಯಿಂದ ಸುಮಾರು 37 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಇತ್ತು.