ಎಲ್ಲದಕ್ಕೂ ಒಂದು ಮಿತಿ ಇದೆ, ಪಂತ್ ಬಿಟ್ಟು ಸಂಜು ಸ್ಯಾಮ್ಸನ್ ಆಡಿಸಿ

ಟೀಂ ಇಂಡಿಯಾ ಅಭಿಮಾನಿಗಳೆದುರು ಇರುವ ಬಹುದೊಡ್ಡ ಪ್ರಶ್ನೆ ಅಂದ್ರೆ ಭಾರತ ಪ್ಲೇಯಿಂಗ್ ಇಲೆವೆನ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ರನ್ನು ಏಕೆ ಪದೇ ಪದೇ ವೈಫಲ್ಯಗೊಂಡರೂ ಆಡಿಸಲಾಗುತ್ತಿದೆ ಎಂದು. ಇತ್ತೀಚೆಗಂತೂ ರಿಷಭ್ ಪಂತ್ ಬ್ಯಾಟಿಂಗ್ ಮತ್ತಷ್ಟು ಕಳೆಗುಂದಿದೆ
ಇತ್ತೀಚಿನ ಟಿ20 ಸರಣಿಯಲ್ಲೂ ಕೂಡ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಟೀಂ ಇಂಡಿಯಾ ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಜೋಡಿಯನ್ನು ಓಪನಿಂಗ್ ಕಳುಹಿಸಿ ಫೇಲ್ಯೂರ್ ಆಗಿದೆ. ಆದ್ರೆ ಸಂಜು ಸ್ಯಾಮ್ಸನ್‌ಗೆ ಒಂದು ಅವಕಾಶ ನೀಡಲಿಲ್ಲ
ಏಷ್ಯಾಕಪ್‌ಗೂ ಮುನ್ನ ಮತ್ತು ಟಿ20 ವಿಶ್ವಕಪ್ 2022ರ ಮುನ್ನ ಸಂಜುಗೆ ಅವಕಾಶ ನೀಡಲಾಯ್ತು. ಆತ ಉತ್ತಮವಾಗಿ ಆಡಿದ್ರೂ ಸಹ ಈ ಎರಡೂ ಟೂರ್ನಮೆಂಟ್‌ನಲ್ಲಿ ಅವಕಾಶ ನೀಡಲಿಲ್ಲ. ಕಳೆದ ಟಿ20 ಸರಣಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಸ್ಟಾಟರ್ಜಿ ಕಾರಣದಿಂದ ಸಂಜುಗೆ ಚಾನ್ಸ್ ಕೊಡಲಿಲ್ಲ ಎಂದಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ರೀತಿಂದರ್ ಸಿಂಗ್ ಸೋಧಿ ಈ ಕುರಿತಾಗಿ ಮಾತನಾಡಿದ್ದು, ರಿಷಭ್ ಪಂತ್ ಸಿಕ್ಕಂತಹ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಾಗಿದೆ ಮತ್ತು ಈಗ ಭಾರತ ಬೇರೊಂದು ಮಾರ್ಗ ಯೋಚಿಸುವುದೊಂದೆ ಬಾಕಿ ಇದೆ ಎಂದಿದ್ದಾರೆ.
ರೀತಿಂದರ್ ಸಿಂಗ್ ಪ್ರಕಾರ ಸಂಜು ಸ್ಯಾಮ್ಸನ್ ಎಡಗೈ ಬ್ಯಾಟರ್ ರಿಷಭ್ ಪಂತ್‌ಗಿಂತ ಒಂದು ಹೆಜ್ಜೆ ಮುಂದಿದ್ದಾರೆ.
ರಿಷಭ್ ಪಂತ್ ಇದುವರೆಗೆ 90ಕ್ಕೂ ಅಧಿಕ ವೈಟ್ ಬಾಲ್ ಫಾರ್ಮೆಟ್ ಪಂದ್ಯಗಳನ್ನ ಆಡಿದ್ದಾರೆ. ಆತ ಗಳಿಸಿರೋದು ಕೇವಲ 1827 ರನ್‌ಗಳು. ಆತನ ಟಿ20 ಬ್ಯಾಟಿಂಗ್ ಸರಾಸರಿ ಕೇವಲ 22ರಷ್ಟಿದೆ. 36 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದ್ರೆ ಅದೇ ಸಂಜು 26 ವೈಟ್ ಬಾಲ್ ಪಂದ್ಯಗಳನ್ನ ಆಡಿದ್ದು, ಟಿ20 ಸರಣಿಯಲ್ಲಿ ಬಿಳಿ ಚೆಂಡಿನ ಆಟದಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.