ನರೇಂದ್ರ ಮೋದಿ ರೈತರ ವಿರೋಧಿನಾ: ನೀರಲಕೇರಿ ಪ್ರಶ್ನೆ
ಧಾರವಾಡ
ಪ್ರಧಾನಿ ಮೋದಿ ವಿದೇಶದಲ್ಲಿ ಯಾರೆ ಸತ್ತರು ಸಾಂತ್ವನ ಹೇಳ್ತಾರೆ, ಪಕ್ಕದಲ್ಲಿ ರೈತರು ಮೃತಪಟ್ಟರೆ ಸಾಂತ್ವನ ಹೇಳಲ್ಲ ಎಂದು ಮಾಧ್ಯಮ ವಿಶ್ಲೇಷಕ ಪಿಎಚ್ ನೀರಲಕೇರಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಧಾರವಾಡದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಧಮ್ಕಿ ಆಳ್ವಿಕೆ ಮಾಡ್ತಿದೆ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಮೌರ್ಯ ಬರುವ ದಾರಿಯಲ್ಲಿ ಕಪ್ಪು ಬಟ್ಟೆ ಕಟ್ಟಿ ಹೋರಾಟದ ವೇಳೆ ರೈತರ ಮೇಲೆ ಹಲ್ಲೆ ನಡೆಸಿ ಕೊಲ್ಲುವ ಕೆಲಸ ಮಾಡಿದ್ದಾರೆ. ಎಂಟು ರೈತರ ಸಾವಿಗೆ ಉತ್ತರ ಪ್ರದೇಶ ಸರ್ಕಾರ ನೇರ ಹೊಣೆಯಾಗಿದ್ದು, ಈ ಕಾರಣಕ್ಕೆ ಉತ್ತರ ಪ್ರದೇಶದ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು, ಅಲ್ಲದೇ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.