ಲಟ್ಟಿ ಫುಡ್ಸ್ ನಿಂದ ಗೋಧಿ ಹುಗ್ಗಿ ಸವಿಯಲು ಸಿದ್ಧ |Dharwad|
2021 ನೇ ವರ್ಷದ ಆರಂಭದಲ್ಲಿ ಬೆಳಗಾವಿ ರಸ್ತೆಯಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಲಟ್ಟಿ ಫುಡ್ಸ್ ಪ್ರೈ.ಲಿ,ಹೆಸರಿನಲ್ಲಿ ಗೋಧಿ ಹುಗ್ಗಿ ಉತ್ಪಾದನಾ ಘಟಕ ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಗೋಧಿ ಹುಗ್ಗಿ ತಯಾರಿಸಿದ 6 ತಿಂಗಳ ನಂತರವೂ ತನ್ನ ಸ್ವಾದ ಕಾಯ್ದುಕೊಳ್ಳಲಿದೆ.ಹೀಗಾಗಿ ದೀರ್ಘಕಾಲಿನ ಸಿಹಿ ಆಹಾರ ಪದಾರ್ಥವಾಗಿ ಬಳಸಲು ಸೂಕ್ತವಾಗಿದೆ ಎಂದು ವೀರಭದ್ರಪ್ಪ ಲಟ್ಟಿ ಮಾಹಿತಿ ನೀಡಿದ್ರು. ಧಾರವಾಡದಲ್ಲಿ ಸುದ್ದಿಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ದೇಶಪಾಂಡೆ ಫೌಂಡೇಶನ್ನ ನೊವೋದ್ಯಮಿಗಳ ಪರಿಚಯ ಕಾರ್ಯದ ಸಹಾಯದಿಂದ ಗೋಧಿ ಹುಗ್ಗಿಯ ಬಾಕ್ಸ್ (ಟಿನ್) ಸಿದ್ಧಪಡಿಸಿ 2019 ರಿಂದ ಪ್ರಾಯೋಗಿಕವಾಗಿ ಗೋಧಿ ಹುಗ್ಗಿ ತಯಾರಿಸಿದ 6 ತಿಂಗಳ ನಂತರವೂ ತನ್ನ ಸ್ವಾದ ಕಾಯ್ದುಕೊಳ್ಳಲಿದೆ.ಹೀಗಾಗಿ ದೀರ್ಘಕಾಲಿನ ಸಿಹಿ ಆಹಾರ ಪದಾರ್ಥವಾಗಿ ಬಳಸಲು ಸೂಕ್ತವಾಗಿದೆ. ಗೋಧಿಯ ಜೊತೆ ಬೆಲ್ಲದ ಮಿಶ್ರಣ ಇರುವುದರಿಂದ ಮಧುಮೇಹಿಗಳು ಕೂಡ ಸೇವಿಸಲು ಯೋಗ್ಯವಾಗಲಿದೆ.ಇಂತಹ ಉತ್ತರ ಕರ್ನಾಟಕದ ಚಿರಪರಿಚಿತ ಗೋಧಿ ಹುಗ್ಗಿಗೆ ಸಿ.ಎಫ್.ಟಿ.ಆರ್.ಐ ನಿಂದ ಮಾನ್ಯತೆ ಸಿಗಲಿದೆ ಎಂಬ ವಿಶ್ವಾಸದಿಂದ ಘಟಕ ಕಾರ್ಯಾರಂಭ ಮಾಡಿದೆ.ಇದೀಗ ಸಿ.ಎಫ್.ಟಿ.ಆರ್.ಐನಿಂದ ಮಾನ್ಯತೆ ಕೂಡ ಲಭಿಸಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದರು..