ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ

ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ

ಧಾರವಾಡ: ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಇದ್ದ ತಪೋವನದಲ್ಲೀಗ ನಿರವಮೌನ ಆವರಿಸಿದೆ.

ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಹಾಗೂ ಯಾವುದೇ ಕಾರ್ಯಕ್ರಮಗಳು ಇದ್ದರು ಅವರ ವಾಸ್ತವ್ಯ ಧಾರವಾಡದ ತಪೋವನ. ಅಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಹತ್ವ ನೀಡಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಅತ್ಯಂತ ಪ್ರೀತಿ ಹಾಗೂ ಸಂತಸದಿಂದ ನಿಸರ್ಗದಲ್ಲಿ ವಾತಾವರಣವನ್ನ ಅನುಭವಿಸುತ್ತಿದ್ದರು.

ಮಹಾತಪಸ್ವಿ ಕುಮಾರೇಶ್ವರ ಸ್ವಾಮೀಜಿಗಳ ತಪೋವನ ಅಂದರೆ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಪಂಚ ಪ್ರಾಣವಾಗಿತ್ತು. ಯಾವುದೇ ಅಹಂ ಇಲ್ಲದೇ ಸರಳರಲ್ಲಿ ಸರಳರಾಗಿ ತಮ್ಮ ಆಘಾದವಾದ ಜ್ಞಾನ ಸು಼ಧೆಯನ್ನ ಜನರಿಗೆ ನೀಡುತಿದ್ದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಈ ಸ್ಥಳವೂ ಒಂದು ಪ್ರೇರಣೆಯಾಗಿತ್ತು.