ಮೈಸೂರು ದಸರಾ ಮಹೋತ್ಸವ-೨೦೨೧

00:00
00:00

ಮೈಸೂರು

ಕರ್ನಾಟಕದ ಸಾಂಸ್ಕೃ ತಿಕ ನಗರಿ ಮೈಸೂರಿನಲ್ಲಿ ವೈಭವದ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ. ನವರಾತ್ರಿ ೩ನೇ ದಿನ ದುರ್ಗಾದೇವಿ ೩ನೇ ಅವತಾರ ಚಂದ್ರಘಂಟಾ ಪೂಜೆ ಜರುಗಿದೆ. ಅಡತಡೆಗಳು, ಚಿಂತೆಗಳನ್ನು ನೋವು ಇತ್ಯಾದಿ ನಿವಾರಣೆಗಾಗಿ ಚಂದ್ರಘಂಟಾ ಪೂಜೆ ಮಾಡಲಾಗುತ್ತದೆ. ಕೋಡಿ ಸೋಮೇಶ್ವರ ದೇವಾಲಯದಿಂದ ಕಳಸ ತಂದು ಪಟ್ಟದ ಆನೆ, ಕುದುರೆ, ಒಂಟೆ, ಹಸುವಿಗೆ ಪೂಜೆ ನಡೆಸಲಾಗಿದೆ. ಬಳಿಕ ಸಿಂಹಾಸನವೇರಿದ ಯದುವೀರ ಖಾಸಗಿ ದರ್ಬಾರ ನಡೆಸಿದರು. ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಈ ಖಾಸಗಿ ದರ್ಬಾರ್ ನಡೆಯಿತು.