ರಕ್ತದಾನ ಶಿಬಿರ ಆಯೋಜನೆ, ಅಗ್ನಿಹೋತ್ರಿ ಪರಿವಾರದಿಂದ
ಧಾರವಾಡ.
ದಾನದಲ್ಲಿ ಶ್ರೇಷ್ಠವಾದದ್ದು ರಕ್ತ ದಾನ ಎನ್ನೋ ಗಾದೆ ಮಾತಿದೆ. ಅದ್ರಂತೆ, ದಿವಂಗತ ಎನ್ ಈಶ್ವರ ಪ್ರಸಾದ ಇವರ ಪುಣ್ಯ ಸ್ಮರಣೆ ನಿಮಿತ್ತ ರಕ್ತ ದಾನ ಶಿಬಿರ ನಡೆಸಲಾಯಿತು. ಹೌದು, ಧಾರವಾಡದ ಸೈದಾಪೂರ ಗೌಡ್ರ ಓಣಿಯ ಕಲ್ಲೇಶ್ವರ ದೇವಸ್ಥಾನದಲ್ಲಿ ಅಗ್ನಿಹೋತ್ರಿ ಪರಿವಾರ ಮತ್ತು ಗೆಳೆಯರ ಬಳಗದವರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಿದ್ರು. ಮಾಜಿ ಶಾಸಕ ಎಸ್ ವಿ ಅಗ್ನಿಹೋತ್ರಿ ಅವರ ಸವಿನೆನಪಿಗಾಗಿ ಅಗ್ನಿಹೋತ್ರಿ ಕುಟುಂಬದವರಿಂದ ಈ ರಕ್ತ ದಾನ ಶಿಬಿರವನ್ನು ನಡೆಸಲಾಗುತ್ತದೆ ಎಂದು ಡಾ.ರಾಮನಗೌಡ್ರ ಅವರು ಮಾಹಿತಿ ನೀಡಿದ್ರು. ಮೊದಲಿನ ದಿನಗಳಲ್ಲಿ ಜನರು ರಕ್ತ ಕೋಡಲು ಹಿಂದೇಟು ಹಾಕುತ್ತಿದ್ದರು. ಕಾರಣ ರಕ್ತ ಕೊಟ್ಟರೆ, ದೈಹಿಕವಾಗಿ ವೀಕ್ ಆಗ್ತಾರೆ ಅನ್ನುವ ಭಾವನೆಯಲ್ಲಿ ಇದ್ದರು. ಆದ್ರೆ ಇಂದಿನ ದಿನಗಳಲ್ಲಿ ಯುವಕರು ರಕ್ತ ದಾನ ಮಾಡುವಲ್ಲಿ ಮುಂದೇ ಬರುತ್ತಾರೆ. ಆದ್ರೆ ರಕ್ತ ಕೋಡುವುರಿಂದ ಅಪಘಾತದಲ್ಲಿ ತೊಂದರೆಗೆ ಸಿಲುಕಿದರೆ ಅನುಕೂಲ ಆಗುತ್ತದೆ. ಅದ್ರಂತೆ ಪ್ರಮುಖವಾಗಿ ಹೆರಿಗೆಯ ಸಮಯದಲ್ಲಿ ಮಹಿಳೆಯರಿಗೆ ರಕ್ತದ ಅವಶ್ಯಕತೆ ಇರುತ್ತದೆ. ನಾವು ರಕ್ತದಾನ ಮಾಡಿದ್ರೇ ಎಲ್ಲರಿಗೂ ಅನುಕೂಲ ಅಗುತ್ತದೆ ಎಂದು ಮಾಜಿ ಕಾರ್ಪೋರೆಟರ್ ಸಿ ಎಸ್ ಪಾಟೀಲ ಅವರು ಹೇಳಿದ್ರು.