ಇಂದು ‘RBI ಹಣಕಾಸು ನೀತಿ’ ಘೋಷಣೆ !

ಭಾರತೀಯ ರಿಸರ್ವ್ ಬ್ಯಾಂಕ್’ನ ಹಣಕಾಸು ನೀತಿ ಸಮಿತಿಯ ಸಭೆ ಸೋಮವಾರ ಆರಂಭಗೊಂಡಿದ್ದು, ಅದರ ನಿರ್ಧಾರ ಇಂದು ಪ್ರಕಟಿಸಲಿದೆ. RBI ಸಾಲ ನೀತಿಯ ಫಲಿತಾಂಶಗಳಲ್ಲಿ, ರಿಸರ್ವ್ ಬ್ಯಾಂಕ್ ಈ ಬಾರಿ ನೀತಿ ದರಗಳನ್ನ ಅಂದರೆ ರೆಪೊ ದರವನ್ನ ಎಷ್ಟು ಹೆಚ್ಚಿಸಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರವನ್ನ ನಿಭಾಯಿಸಲು ಆರ್ಬಿಐ ನಿರಂತರವಾಗಿ ಬಡ್ಡಿದರಗಳನ್ನ ಹೆಚ್ಚಿಸುತ್ತಿದೆ.