ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶುವನ್ನು ಪತ್ತೆ ಹಚ್ಚಿದ್ದು ಬೀದಿ ಬೆಕ್ಕುಗಳು; ಪೊಲೀಸರಿಂದ ರಕ್ಷಣೆ
ಮುಂಬೈನ ಪಂತ್ನಗರದ ಬಳಿ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದ್ದು, ಅದನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸ್ ನಿರ್ಭಯಾ ಸ್ಕ್ವಾಡ್ನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ನಂತರ ಅದನ್ನು ರಾಜಾವಾಡಿಗೆ ಕರೆದೊಯ್ಯದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ. ಹಾಗೇ ಪೊಲೀಸ್ ಸಿಬ್ಬಂದಿ ಆ ಮುದ್ದಾದ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನೂ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಮಗುವಿನ ಪಾಲಕರ ಪತ್ತೆ ಕಾರ್ಯವೂ ಶುರುವಾಗಿದೆ.