ಮಂಗಳೂರು ವಿಮಾನ ನಿಲ್ದಾಣಕ್ಕೆ KSRTC ಬಸ್ : ಸಿಟಿಯಿಂದ ಬಸ್ ದರ ಹೀಗಿದೆ

ಮಂಗಳೂರು, ನವೆಂಬರ್ 5: ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಮಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಂಚಾರ ಈಗಾಗಲೆ ಆರಂಭವಾಗಿದೆ. ಇದೀಗ ದರವನ್ನು ಕೆಎಸ್‌ಆರ್‌ಟಿಸಿ ನಿಗದಿ ಪಡಿಸಿದೆ. ನಗರದಿಂದ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮೇರೆಗೆ, ಮಂಗಳೂರು ರೈಲು ನಿಲ್ದಾಣದಿಂದ ಅಂರಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ, ನಗರ ವೋಲ್ವೋ ಸಾರಿಗೆಗಳ ಮಧ್ಯಂತರ ಸ್ಥಳಗಳ ಪ್ರಯಾಣದರವನ್ನು ಕೆಎಸ್‌ಆರ್‌ಟಿಸಿ ಪ್ರಕಟಿಸಿದೆ.
ಮಂಗಳೂರು ರೈಲು ನಿಲ್ದಾಣದಿಂದ ಹೊರಡುವ ವೋಲ್ಟೋ ಬಸ್‌ನಲ್ಲಿ ರೈಲ್ವೇ ನಿಲ್ದಾಣದಿಂದ ಜ್ಯೋತಿಯವರೆಗೆ 20ರೂಪಾಯಿ ದರ, ಕೆಎಸ್‌ಆರ್‌ಟಿಸಿ ಬಿಜೈ ವರೆಗೆ 25ರೂ, ಕುಂಟಿಕಾನದವರೆಗೆ 30ರೂ, ಕೊಂಚಾಡಿಯವರೆಗೆ 35ರೂ, ಕಾವೂರಿನವರೆಗೆ 40ರೂ, ಮರವೂರಿನವರಗೆ 60ರೂ, ಕರಂಬಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 70 ರೂಪಾಯಿ ದರ ನಿಗದಿ ಪಡಿಸಲಾಗಿದೆ.
ಇನ್ನು ಇದೇ ಬಸ್‌ನಲ್ಲಿ ಪ್ರಯಾಣಿಕರು ಜ್ಯೋತಿಯಿಂದ ಬಸ್ ಹಿಡಿಯುವವರಾದರಲ್ಲಿ ಕೆಎಸ್‌ಆರ್‌ಟಿಸಿ ಬಿಜೈವರೆಗೆ 20ರೂ, ಕುಂಟಿಕಾನದವರೆಗೆ 25ರೂ, ಕೊಂಚಾಡಿವರೆಗೆ 30ರೂ, ಕಾವೂರುವರೆಗೆ 35ರೂ, ಮರವೂರುವರೆಗೆ 50ರೂ, ಕರಂಬಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 60ರೂಪಾಯಿ ದರ ನಿಗದಿ ಪಡಿಸಲಾಗಿದೆ.
ಇನ್ನು ಕೆಕೆಎಸ್‌ಆರ್‌ಟಿಸಿ ಬಿಜೈಯಿಂದ ಬಸ್ ಏರುವವರಿಗೆ ಕುಂಟಿಕಾನದವರೆಗೆ 20ರೂ, ಕೊಂಚಾಡಿಯವರೆಗೆ 25ರೂ, ಕಾವೂರುವರೆಗೆ 30ರೂ, ಮರವೂರುವರೆಗೆ 40ರೂ ಮತ್ತು ಕರಂಬಾರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದ ವರೆಗೆ 50 ರೂಪಾಯಿ ದರ ನಿಗದಿ ಪಡಿಸಲಾಗಿದೆ.
ಇನ್ನು ಕುಂಟಿಕಾನದಿಂದ ಬಸ್ ಏರುವ ಪ್ರಯಾಣಿಕರಿಗೆ ಕೊಂಚಾಡಿವರೆಗೆ 20ರೂ, ಕಾವೂರುವರೆಗೆ 25ರೂ, ಮರವೂರುವರೆಗೆ 30ರೂ, ಕರಂಬಾರುವರೆಗೆ 40ರೂಪಾಯಿ ದರ ನಿಗದಿಪಡಿಸಲಾಗಿದೆ.
ಇನ್ನು ಕೊಂಚಾಡಿಯಿಂದ - ಕಾವೂರುವರೆಗೆ 20ರೂ, ಮರವೂರುವರೆಗೆ 30ರೂ,ಕರಂಬಾರುವರೆಗ 40 ರೂ, ಕಾವೂರುನಿಂದ - ಮರವೂರುವರಗೆ 20ರೂ, ಕರಂಬಾರುವರೆಗೆ 30ರೂ. ಪ್ರಯಾಣದರ ನಿಗಧಿಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ ವೇಳಾಪಟ್ಟಿ
ರೈಲುನಿಲ್ದಾಣದ ಬಸ್ ರೈಲು ನಿಲ್ದಾಣದಿಂದ ಬೆಳಗ್ಗೆ 6:30, 8:45, 11:10, ಮಧ್ಯಾಹ್ನ 3, ಸಂಜೆ 5:15 ಮತ್ತು ಸಂಜೆ 7:30 ಕ್ಕೆ ತನ್ನ ಸಂಚಾರ ಪ್ರಾರಂಭಿಸುತ್ತದೆ. ಇತ್ತ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.40, 10, 12:20, 4:05 ಹಾಗೂ ಸಂಜೆ 6:25 ಮತ್ತು ರಾತ್ರಿ 8:45 ಕ್ಕೆ ಪ್ರಾರಂಭವಾಗಲಿದೆ. ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬಸ್ ದರ 300 ರೂ. ಮಣಿಪಾಲದಿಂದ ಬೆಳಗ್ಗೆ 7:15, 8:45, ಸಂಜೆ 5:15ಕ್ಕೆ ಬಸ್ ಪ್ರಯಾಣ ಆರಂಭಿಸಲಿದೆ. ವಿಮಾನ ನಿಲ್ದಾಣದಿಂದ ಮಣಿಪಾಲ್‌ಗೆ ಬಸ್ ಬೆಳಿಗ್ಗೆ 10:45, ಮಧ್ಯಾಹ್ನ 12:30 ಮತ್ತು ರಾತ್ರಿ 9:15 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.