ಸಮಾವೇಶದಲ್ಲಿ ಸೆಲ್ಪಿ ಹುಚ್ಚು: ಯಾತ್ರೆಯೋ ಪೋಟೋ ಶೂಟ್ ಜಾತ್ರೆಯೋ

ನಮ್ಮ ಜನರಿಗೆ ನಿಜಕ್ಕೂ ಸೆಲ್ಪಿ ಕ್ಲಿಕ್ಕಿಸಿಕೊಳ್ಳುವ ಹುಚ್ಚು ಎಷ್ಟಿದೆ ಅಂದರೆ ಜೀವವನ್ನು ಲೆಕ್ಕಿಸದೇ ಸೆಲ್ಪಿಗಾಗಿ ಹರಸಾಹಸ ಪಡುತ್ತಾರೆ. ಬಿಜೆಪಿ ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ನೂಕು ನುಗ್ಗಲಿನಲ್ಲಿ ಕಂಡು ಬಂದ ದೃಶ್ಯವಾಗಿದೆ... ಹೌದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಜನಸ್ವರಾಜ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಮುಗಿಸಿಕೊಂಡು ಕೆಳಗೆ ಬಂದ ಯಡಿಯೂರಪ್ಪ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಆಗಮಿಸಿರುವುದು ಇವರೆಲ್ಲರೂ ಸಮಾವೇಶಕ್ಕೆ ಬಂದಿದ್ದಾರೋ ಅಥವಾ ಸೆಲ್ಪಿಗಾಗಿ ಬಂದಿದ್ದಾರೋ ಎಂಬುವಂತ ಅನುಮಾನ ಕಾಡುವುದಂತೂ ಖಂಡಿತ. ಇನ್ನೂ ಕಾರ್ಯಕರ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗೆ ಸಾಧ್ಯವಾಗದೇ ಪರದಾಡುವಂತಾಗಿದೆ. ಬಿಜೆಪಿ ಸಮಾವೇಶ ಜನಸ್ವರಾಜ್ ಯಾತ್ರೆಯಾಗದೇ ಸೆಲ್ಪಿ ಶೂಟ್ ಯಾತ್ರೆಯಾಗಿದ್ದಂತೂ ಸತ್ಯ...