ಪಕ್ಕದ ಮನೆಯ ಗೋಡೆ ಕುಸಿದು ಅಪಾಯದಲ್ಲಿ ಸಿಲುಕಿದ್ದ ಒಂದೇ ಕುಟುಂಬದ ನಾಲ್ವರ ರಕ್ಷಣೆ

ಹುಬ್ಬಳ್ಳಿ: ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಪರಿಣಾಮ ಗಣೇಶಪೇಟೆಯ ಬಿಂದರಗಿ ಓಣಿಯ ಮನೆಯೊಂದರ ಗೋಡೆಯೊಂದು ಕುಸಿದಿದ್ದು, ಪಕ್ಕದ ಮನೆಯ ನಾಲ್ವರು ಅಪಾಯದಲ್ಲಿ ಸಿಲುಕಿ ಕೆಲಕಾಲ ಆತಂಕದ ವಾತಾವಾರಣ ಸೃಷ್ಟಿಯಾಗಿತ್ತು.
ಬಸವಂತ ಶಿಂಧೆ ಎಂಬುವರ ಮನೆಯ ಗೋಡೆ ಕುಸಿದಿದೆ.
ಸುದ್ದಿ ತಿಳಿಯುತ್ತಿದ್ದತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿದ್ದ ಒಂದೇ ಕುಟುಂಬದ ಶರೀಫಖಾನ್, ಶೈನಾಜ್ ಬಾನು, ಸಾದಿಕ್ ಹಾಗೂ ನಾಜಿಯಾ ಅವರನ್ನು ರಕ್ಷಿಸಿ ಹೊರಗೆ ಕರೆತಂದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಭಂಡಾರಿ ನೇತೃತ್ವದ ತಂಡ ನಾಲ್ವರನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು.