ದುರ್ಗಾದೇವಿಗೆ ಏಳನೇ ದಿನ ವಿಶೇಷ ಅಲಂಕಾರ
ಧಾರವಾಡ ಮರಾಠಾ ಕಾಲೊನಿ ದುರ್ಗಾ ದೇವಿ ದೇವಸ್ಥಾನದಲ್ಲಿ ಮಹಾನವಮಿ ನವರಾತ್ರಿ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಅದ್ರಲ್ಲೊ ಏಳನೇ ದಿನವಾದ ಇಂದು ವಿಶೇಷ ಅಲಂಕಾರ ಜೊತೆಗೆ ಪೂಜೆ ಸಲ್ಲಿಸಿದರು. ಈ ಅಲಂಕಾರ ದೃಶ್ಯ ನೋಡುಗರ ಕಣ್ಮನ ಸೆಳೆಯುವಂತೆ ಇತ್ತು. ಧಾರವಾಡ ಕಿಲ್ಲಾ ಓಣಿಯ ದುರ್ಗಾ ಪರಮೇಶ್ವರಿ ಮುತ್ತಿನ ಅಲಂಕಾರದಿಂದ ಕಂಗೋಳಿಸಿದ್ದು ಭಕ್ತರು ದೇವಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.